ಅಜ್ಜಾವರ ಗ್ರಾಮದ ಅಡ್ಕದಲ್ಲಿ ಜುಲೈ 27 ರಂದು ಝೈನಿಯಾ ಮಾಸಿಕ ಮಜ್ಲಿಸುನ್ನೂರ್ ನಡೆಯಿತು.
ಕಾರ್ಗಕ್ರಮದ ನೇತೃತ್ವ ವಹಿಸಿದ್ದ ಸಮಸ್ತ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಪೈಝಿ ತೊಡಾರು ಮಾತನಾಡಿ ಗಡಿಯಾರ ದ ಸೆಕೆಂಡ್ ಗಳು ಪ್ರತೀ ಸಮಯದಲ್ಲಿ ಕಟ್ ಟಕ್ ಬಡಿಯುವ ರೀತಿ ಮನುಷ್ಯನ ಆಯುಷ್ಯ ಪ್ರತೀ ಸೆಕೆಂಡ್ ಕಟ್ ಆಗುತ್ತಲೇ ಇರುತ್ತದೆ. ಆದ್ದರಿಂದ ಅಮೂಲ್ಯ ಸಮಯವನ್ನು ಉತ್ತಮ ಒಳಿತು ಕಾರ್ಯಗಳಿಗೆ ಉಪಯೋಗಿಸಿ. ಮಜ್ಲಿಸುನ್ನೂರ್ ನಾಡಿಗೆ ಮತ್ತು ಮನಸ್ಸಿಗೆ ಬೆಳಕು ನೀಡುವ ವಸ್ತುವಾಗಿದೆ.ಪ್ರತಿ ತಿಂಗಳು ಎಸ್ ಕೆ ಎಸ್ ಎಸ್ ಎಫ್ ನ ಝೈನ್ ಎಕ್ಸೆಲೆನ್ಸ್ ಫಾರ್ ಮೋರೆಲ್ ಎಜುಕೇಷನ್ ಸಂಸ್ಥೆಯ ನಡೆಸುವ ಝೈನಿಯಾ ಮಾಸಿಕ ಮಜ್ಲಿಸುನ್ನೂರ್ ನಲ್ಲಿ ಪಾಲ್ಗೊಂಡು ಯಶಸ್ವಿಕಾಣಿರಿ ಎಂದು ಹಾಜಿ ಎಂ ಎ ಅಬ್ದುಲ್ಲಾ ಉಸ್ತಾದ್ ಮಂಡೆಕೋಲು ರವರ ಸ್ಮರಣೆ ನೆಲೆಗೊಂಡಿರುವ ರಿಪಾಇಯ್ಯ ಮಸ್ಜಿದ್ ಅಡ್ಕದಲ್ಲಿ ಹೇಳಿದರು.
ಝೈನಿಯಾ ಪ್ರಾಂಶುಪಾಲರಾದ ಉಸ್ತಾದ್ ಅಬ್ದುಲ್ಲಾ ನಿಝಾಮಿ ಸಂಶುಲ್ ಉಲಮಾ ಮೌಲೀದ್ ನೇತೃತ್ವ ವಹಿಸಿದ್ದರು.
ಮಜ್ಲಿಸ್ ನಲ್ಲಿ ದಫ್ ಉಸ್ತಾದರಾದ ಎಂ ಎ ಮಹಮ್ಮದ್ ಕುಂಞಿ, ಎಂ ಎ ಹಸೈನಾರ್ ಹಾಜಿ, ಜಮ್ಯಹತುಲ್ ಉಲಮಾ ಸುಳ್ಯ ತಾಲೂಕು ಕೋಶಾಧಿಕಾರಿ ಅಹ್ಮದ್ ಮದನಿ, ಬದ್ರಿಯಾ ಜುಮಾ ಮಸೀದಿ ಇರುವಂಬಳ್ಳ ಪ್ರ ಕಾರ್ಯದರ್ಶಿ ಮಹಮ್ಮದ್ ತುಪ್ಪಕಲ್ಲು, ಜಮ್ಯಹತುಲ್ ಮುಹಲ್ಲಿಂ ಕೋಶಾಧಿಕಾರಿ ಹಸೈನಾರ್ ದರ್ಮತಣ್ಣಿ, ಎಸ್ ವೈ ಎಸ್ ಸುಳ್ಯ ತಾಲೂಕು ಅಧ್ಯಕ್ಷರಾದ ಹಾಜಿ ಕತ್ತರ್ ಇಬ್ರಾಹಿಂ, ಎಸ್ ವೈ ಎಸ್ ಪ್ರೊ ಕಾರ್ಯದರ್ಶಿ ಶಾಫಿ ದಾರಿಮಿ ಅಜ್ಜಾವರ,ಕೆ ಎಚ್ ರಝ್ಝಾಕ್ ಮುಸ್ಲಿಯಾರ್, ಜಿ ಎ ಹಮೀದ್ ಮುಸ್ಲಿಯಾರ್ ಅಡ್ಕ, ಅಲಿ ಉಸ್ತಾದ್ ಅಡ್ಕ, ಎಸ್ ಎಂ ಎಫ್ ಅಧ್ಯಕ್ಷರಾದ ಹಮೀದ್ ಹಾಜಿ ಸುಳ್ಯ, ಎನ್ ಐ ಎಂ ಅಜ್ಜಾವರ ಬಿಲ್ಡಿಂಗ್ ಕಮಿಟಿ ಪ್ರ ಕಾರ್ಯದರ್ಶಿ ಅಬ್ದುಲ್ ಖಾದರ್ ಬಯಂಬು, ಝೈನಿಯಾ ಅಧ್ಯಾಪಕರಾದ ಅಬ್ದುಲ್ಲಾ ಕೆ ಎಂ, ಇರುವಂಬಳ್ಳ ಜಮಾಹತ್ ಮಾಜಿ ಅಧ್ಯಕ್ಷರಾದ ಹಸೈನಾರ್ ಹಾಜಿ ಗೊರಡ್ಕ, ಎಂ ಜೆ ಎಂ ಅಜ್ಜಾವರ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ, ಎಂ ಜೆ ಎಂ ಮಂಡೆಕೋಲು ಕಾರ್ಯದರ್ಶಿ ಅಬ್ದುಲ್ಲಾ ಮಾರ್ಗ, ಹಸೈನಾರ್ ಹಾಜಿ ಇರುವಂಬಳ್ಳ, ಹಸೈನಾರ್ ಹಾಜಿ ಅಡಲ್, ಎಂ ಜೆ ಎಂ ಪ್ರ ಕಾರ್ಯದರ್ಶಿ ಶಾಫಿ ಮುಕ್ರಿ ಅಜ್ಜಾವರ, ಜಿ ಎಸ್ ಮಹಮ್ಮದ್ ಮದನಿ, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಪ್ರ ಕಾರ್ಯದರ್ಶಿ ಆಶಿಕ್ ಸುಳ್ಯ, ಎಸ್ ಕೆ ಎಸ್ ಎಸ್ ಎಫ್ ಅಜ್ಜಾವರ ಕ್ಲಸ್ಟರ್ ಅಧ್ಯಕ್ಷರಾದ ಅಬ್ದುಲ್ ಖಾದರ್ ನೆಲ್ಯಡ್ಕ, ಅಜ್ಜಾವರ ಶಾಖೆ ಪ್ರ ಕಾರ್ಯದರ್ಶಿ ಅಬೂಬಕ್ಕರ್ ಅಝ್ ಅರಿ, ಮಂಡೆಕೋಲು ಶಾಖೆ ಕೋಶಾಧಿಕಾರಿ ಸಿರಾಜ್ ಶಾಲೆಕ್ಕಾರ್, ಅಲ್ ಅಮೀನ್ ಮಾಜಿ ಅಧ್ಯಕ್ಷರಾದ ಶಾಫಿ ಕೆ ಎಂ, ಎಂ ಜೆ ಎಂ ಕೋಶಾಧಿಕಾರಿ ಶರೀಫ್ ರಿಲಾಕ್ಸ್, ಅಲ್ ಅಮೀನ್ ಗಲ್ಫ್ ಅಧ್ಯಕ್ಷರಾದ ಅಬೂಬಕ್ಕರ್ ಸಿ ಎಚ್, ಅಲ್ ಅಮೀನ್ ಯಂಗ್ ಮೆನ್ಸ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಕೆ ಎ, ಕಾರ್ಯದರ್ಶಿ ಅಬ್ದುಲ್ ಖಾದರ್ ಕೆ ಎಂ, ಝೈನಿಯಾ ಉಪಾಧ್ಯಕ್ಷರಾದ ಯಾಕುಬ್ ಜಿ ಎ, ಸಲೀಂ ಎಂ ಎ, ವಿಖಾಯ ಸುಳ್ಯ ವಲಯ ಕಾರ್ಯದರ್ಶಿ ಶರೀಫ್ ಸಿ ಎ, ಎಸ್ ಕೆ ಎಸ್ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖೆ ಕಾರ್ಯದರ್ಶಿ ಸಿದ್ದೀಕ್ ಬೊವೀಕ್ಕಾನ, ಕೋಶಾಧಿಕಾರಿ ಆರಿಸ್ ಕಲ್ತಡ್ಕ , ಝೈನಿಯಾ ಪ್ರ ಕಾರ್ಯದರ್ಶಿ ಮಹಮ್ಮದ್ ಶರೀಫ್ ಜಿ ಎಚ್, ಸಾದಿಕ್ ಗುರುವಂಮೊಟ್ಟೆ, ಇಸ್ ಹಾಕ್ ತಲಪ್ಪಾಡಿ , ಕಬೀರ್ ಪೈಝಿ ಅಜ್ಜಾವರ, ರಫೀಕ್ ಸಿ ಎಂ, ಹಾಗೂ ನೂರಾರು ಮಹಿಳೆಯರು, ಪುರುಷರು ಭಾಗವಹಿಸಿದ್ದರು.
ಕಾರ್ಯಕ್ರಮ ಝೈನ್ ಎಕ್ಸೆಲೆನ್ಸ್ ಫಾರ್ ಮೋರೆಲ್ ಎಜುಕೇಷನ್ ಸಂಸ್ಥೆಯ ಅಧ್ಯಕ್ಷರಾದ ಅನ್ವರ್ ಅಲಿ ದಾರಿಮಿ ಉಸ್ತಾದ್ ಅಧ್ಯಕ್ಷತೆಯಲ್ಲಿ ಸ್ವಾಗತಿಸಿ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಸಿದ್ದೀಕ್ ಅಡ್ಕ ಕಾರ್ಯಕ್ರಮ ನಿರೂಪಿಸಿದರು.