ಅಮೆಜಾನ್ ಕಿಡ್ಸ್ ವೇರ್ ನ ಮಾಡೆಲ್ ಆಗಿ ಕಾಣಿಸಿಕೊಂಡ ಸಂಪಾಜೆಯ ಪುಟಾಣಿ
ಬೆಂಗಳೂರಿನ RAS ಮೀಡಿಯಾ & ಎಂಟರ್ಟೈನ್ಮೆಂಟ್ ಜಾಹೀರಾತು ಸಂಸ್ಥೆಗೆ ಸಂಪಾಜೆ ಯ 6 ವರ್ಷ ಪ್ರಾಯದ ಪುಟಾಣಿ ಸಮೃದ್ಧಿ ಎಸ್. ಆಯ್ಕೆಯಾಗಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ತಾಯಿಯ ಸಹಾಯದ ಮೂಲಕ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದು, ವೀವ್ಸ್ , ಲೈಕ್, ಬರುತ್ತಿದೆ. ಹಾಗಾಗಿ RAS ಸಂಸ್ಥೆಯ ಆಡಿಷನ್ ಜಾಹೀರಾತು ನೋಡಿ ಅಪ್ಲೈ ಮಾಡಿದ ಇವರು ಪ್ರೊಸೀಜರ್ ಹಾಗೇ ಸೆಲೆಕ್ಷನ್ ನಡೆದು ಬೆಂಗಳೂರಿನಲ್ಲಿ RAS ಸಂಸ್ಥೆಯ ಮುಖಾಂತರ ಫೋಟೋಶೂಟ್ ನಡೆದು ಇದೀಗ ಅಮೆಜಾನ್ ಆ್ಯಪ್ ನ ಪುಟಾಣಿ ಮಕ್ಕಳ ವಿಭಾಗದ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾಳೆ.
ಮುಂದಿನ ದಿನಗಳಲ್ಲಿ ಬೇರೆ ಬೇರೆ ಆ್ಯಪ್ ನ ಮಕ್ಕಳ ವಿಭಾಗದ ಜಾಹೀರಾತುಗಳಲ್ಲಿ ಅವಕಾಶ ಸಿಗಲಿದೆ.
ಇದು ಒಂದು ಆನ್ಲೈನ್ ಶಾಪ್ ಆಪ್ ನ ಜಾಹೀರಾತು ಮಾಡೆಲ್ ಗಳವೇದಿಕೆಯಾಗಿದ್ದು, ಇದರಲ್ಲಿ ಆಯ್ಕೆಯಾದ ನಂತರ ಫೋಟೋಶೂಟ್ ನಡೆಸಿ ಅಮೆಜಾನ್ , Myntra, hopscotch ಇನ್ನಿತರ ಹೆಸರಾಂತ ಆ್ಯಪ್ ಗಳ ಮೂಲಕ ಬಟ್ಟೆಗಳ ಅಥವಾ ಇನ್ನಿತರ ವಸ್ತುಗಳ ಮಾಡೆಲ್ ಆಗಿ ಹೊರಹೊಮ್ಮಬಹುದು.
ಸಮೃದ್ಧಿ ಎಸ್. ಸಂಪಾಜೆ ಗ್ರಾಮದ ಗೂನಡ್ಕ ಸದಾನಂದ ಎಂ. ಹಾಗೂ ಸುಳ್ಯ ನಗರ ಪಂಚಾಯತ್ ಉದ್ಯೋಗಿ ಆಶಾ ಬಿ.ಆರ್. ದಂಪತಿಯ ಪುತ್ರಿ. ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಒಂದನೇ ತರಗತಿ ಕಲಿಯುತ್ತಿದ್ದು, ಡ್ಯಾನ್ಸ್, ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ಮೂಲಕ ಜನರ ಗಮನ ಸೆಳೆದಿದ್ದಾಳೆ.