ದುಗಲಡ್ಕ ನೀರಬಿದಿರೆ ಬಳಿ ಕೆಸರಿನ ಹೊಂಡವಾದ ರಸ್ತೆ

0

ಶ್ರಮದಾನ ಮೂಲಕ ದುರಸ್ತಿ ಮಾಡಿದ ಸ್ಥಳೀಯರು

ಸುಳ್ಯದ ಬಹು ಬೇಡಿಕೆಯ ರಸ್ತೆಯಲ್ಲಿ ಒಂದಾದ ಕೊಡಿಯಾಲ ಬೈಲು- ದುಗಲಡ್ಕ ರಸ್ತೆಯ ಸಮಸ್ಯೆ ಬಗೆಹರಿಯದ ಸಮಸ್ಯೆಯಾಗಿ ಉಳಿದುಕೊಂಡಿದೆ.

ದುರಸ್ತಿ ಕಾರ್ಯಕ್ಕಾಗಿ ರಸ್ತೆಯನ್ನು ಅಗೆದು ಹಾಕಿದ್ದು ಮಳೆಗಾಲದ ಕಾರಣದಿಂದ ಮಳೆ ನೀರು ನಿಂತು ಬೃಹತ್ ಹೊಂಡ ನಿರ್ಮಾಣವಾಗಿ ಜನರಿಗೆ ನಡೆದಾಡಲು ಮತ್ತು ವಾಹನಗಳಿಗೆ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿಗೆ ಬಂದು ತಲುಪಿದೆ.


ದಿನಂಪ್ರತಿ ನೂರಾರು ಮಂದಿ ಸಂಚರಿಸುತ್ತಿದ್ದು, ದುಗಲಡ್ಕ ಶಾಲೆ ಮತ್ತು ದೈವಸ್ಥಾನ ಸಂಪರ್ಕ ಸೇರಿದಂತೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ.ಇಲ್ಲಿಬೃಹತ್ ಹೊಂಡಗಳು ನಿರ್ಮಾಣವಾಗಿ ರಸ್ತೆ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ.
ಇದರಿಂದಾಗಿ ಕಳೆದ ನಾಲ್ಕು ಐದು ದಿನಗಳಿಂದ ಈ ಭಾಗಕ್ಕೆ ಬರುತ್ತಿದ್ದ ಖಾಸಗಿ ಬಸ್ಸು ಕಷ್ಟದಲ್ಲಿ ಪ್ರಯಾಣಿಸುತ್ತಿದೆ. ಸಂಚಾರದ ದುಸ್ತಿತಿಯನ್ನು ಮನಗಂಡು ಸ್ಥಳೀಯ ನಿವಾಸಿಗಳೆಲ್ಲರು ಸೇರಿ ಇಂದು ಶ್ರಮದಾನ ಮಾಡುವ ಭಾಗಶ: ಸರಿಪಡಿಸಿದರು.

ಶ್ರಮದಾನದಲ್ಲಿ ಸ್ಥಳೀಯ ನಿವಾಸಿಗಳಾದ ಬಾಲಕೃಷ್ಣ ನಾಯರ್ ನೀರಬಿದಿರೆ,ಇಬ್ರಾಹಿಂ ಜನಪ್ರಿಯ,ಬಶೀರ್ ನೀರಬಿದಿರೆ, ಕರಿಂ, ರಫೀಕ್, ಐತಪ್ಪ ನಾಯ್ಕ ನೀರಬಿದಿರೆ, ಪರಮೇಶ್ವರ ನೀರಬಿದಿರೆ, ಅಶ್ರಫ್ ಸೇರಿದಂತೆ ಸ್ಥಳೀಯ ನಿವಾಸಿಗಳು ಕೆಲವು ಯುವಕರು ಭಾಗವಹಿಸಿದ್ದರು.


ನಗರ ಪಂಚಾಯತ್ ವತಿಯಿಂದ ಮಾಡಿದ ಚರಂಡಿ ದುರಸ್ತಿ ಕಾರ್ಯ ಸರಿಯಾಗದೆ ಈ ರೀತಿಯಾಗಲು ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.