ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ. ಬಸ್ ತಂಗುದಾಣ ಹಾಗೂ ತಂಗುದಾಣ ಕ್ಕೆ ಬರುವ ರಸ್ತೆ ಅಭಿವೃದ್ಧಿ ನಮ್ಮ ವ್ಯಾಪ್ತಿಯಲ್ಲಿ ಇಲ್ಲ, ಅದು ಕೆ.ಎಸ್.ಆರ್.ಟಿ.ಯ ಆಸ್ತಿ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟ ಪಡಿಸಿದೆ.
ಜು.28 ರಂದು ಸುಬ್ರಹ್ಮಣ್ಯ ಕೆ.ಎಸ್.ಆರ್.ಟಿ.ಸಿ ಬಸ್ ತಂಗುದಾಣದ ರಸ್ತೆ ದುರವ್ಯವಸ್ಥೆ ಬಗ್ಗೆ ಮಾಡಿರು ವರದಿಗೆ ಪ್ರತಿಕ್ರಿಯಿಸಿರುವ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸುಮಾರು 45 ವರ್ಷಗಳ ಹಿಂದೆ ದೇವಾಲಯದ ವತಿಯಿಂದ ಕೆ.ಎಸ್.ಆರ್.ಟಿ.ಸಿ.ಗೆ ಬಸ್ ನಿಲ್ದಾಣದ ಅವಶ್ಯಕತೆಗಾಗಿ 2 ಎಕ್ರೆ ಜಾಗವನ್ನು ಉಚಿತವಾಗಿ ದಾನ ನೀಡಿತ್ತು. ದೇವಾಲಯ ವತಿಯಿಂದ ಮಾಸ್ಟರ್ ಪ್ಲಾನ್ ಕೆಲಸಕ್ಕಾಗುವಾಗ ದೇವಾಲಯ ವತಿಯಿಂದ 25 ಸೆಂಟ್ಸ್ ಜಾಗವನ್ನು ಮತ್ತೆ ದೇವಾಲಯದ ರಸ್ತೆಗಾಗಿ ಪಡೆದುಕೊಳ್ಳುವಾಗ 84 ಲಕ್ಷ ರೂಪಾಯಿಯನ್ನು ಕೂಡ ಕೆ.ಎಸ್.ಆರ್.ಟಿ.ಗೆ ಪಾವತಿಯೂ ಮಾಡಿತ್ತು.
ಆದರೆ ಆ ಜಾಗವನ್ನು ಪೂರ್ಣವಾಗಿ ವಶಕ್ಕೆ ಪಡೆದಿಲ್ಲ 84 ಲಕ್ಷ ಪಾವತಿ ಮಾತ್ರ ಆಗಿದೆ ಆ ಹಣದಲ್ಲಿ ಅವರ ಈ ರಸ್ತೆಯನ್ನು ಅಭಿವೃದ್ಧಿ ಮಾಡಬಹುದಿತ್ತು ಆದರೆ ಅವರು ಮಾಡದೆ ಆ ಹಣವನ್ನು ಬೇರೆಲ್ಲಿಗೋ ಖರ್ಚು ಮಾಡಿದ್ದಾರೆ ಇವಾಗ ಅವರ ಒಳಾಂಗಣದ ರಸ್ತೆಯನ್ನ ದೇವಸ್ಥಾನದ ತಲೆಗೆ ಕಟ್ಟುವುದು ಎಷ್ಟು ಸರಿ.
ಕೆ.ಎಸ್. ಆರ್.ಟಿ. ಬಸ್ ತಂಗುದಾಣಕ್ಕೆ ಹೋಗುವ ರಸ್ತೆ ಅವ್ಯವಸ್ಥೆ ಬಗ್ಗೆ ದೇವಸ್ಥಾನ ಜವಾಬ್ದಾರಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.