ವಿಶ್ವ ಸ್ಕೌಟ್ಸ್, ಗೈಡ್ಸ್ ಜಾಂಬೂರಿಯಲ್ಲಿ ಭಾಗವಹಿಸಲು ತೆರಳುತ್ತಿರುವ ಅಶ್ವಿನಿ ಶರವುರಿಗೆ ಶುಭಕೋರುವ ಸಮಾರಂಭ

0

೨೦೨೩ ಅಗಸ್ಟ್ ೦೧ ರಿಂದ ೧೨ ರವರೆಗೆ ದಕ್ಷಿಣ ಕೊರಿಯಾ ದೇಶದಲ್ಲಿ ನಡೆಯಲಿರುವ , ೨೫ ನೇ ವಿಶ್ವ ಸ್ಕೌಟ್ಸ್,ಗೈಡ್ಸ್ ಜಾಂಬೂರಿಯಲ್ಲಿ ಭಾಗವಹಿಸಲು ತೆರಳುತ್ತಿರುವ ಅಶ್ವಿನಿ ಶರವು ಇವರಿಗೆ ಶುಭಕೋರುವ ಸಮಾರಂಭ ಜುಲೈ ೨೮ ರಂದು ರೋಟರಿ ಪ್ರೌಢಶಾಲೆಯಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶಶಿಧರ್ ಎಂ.ಜೆ ವಹಿಸಿದ್ದರು.
ಸ್ಕೌಟ್ ಮಾಸ್ತರ್ ಶ್ರೀಹರಿ ಪೈಂದೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ರೋಟರಿ ಸುಳ್ಯದ ಅಧ್ಯಕ್ಷರಾದ ರೊ.ಆನಂದ ಖಂಡಿಗ, ರೋಟರಿ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ರೊ.ಗಿರಿಜಾಶಂಕರ್ ತುದಿಯಡ್ಕ , ಶಾಲಾ ಆಡಳಿತ ಮಂಡಳಿಯ ಸದಸ್ಯಯರಾದ ರೊ.ಪ್ರಭಾಕರ್ ನಾಯರ್, ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷರಾದ ಮಾಧವ ಮಡಪ್ಪಾಡಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ವೀಣಾ ಶೇಡಿಕಜೆ , ಉಪನ್ಯಾಸಕಿ ಶ್ರೀಮತಿ ಸಪ್ನಾ ಪಿ. ಶುಭಹಾರೈಸಿದರು.

ನಂತರ ಸ್ಥಳೀಯ ಸಂಸ್ಥೆಯ ವತಿಯಿಂದ, ರೋಟರಿ ವಿದ್ಯಾ ಸಂಸ್ಥೆಯ ವತಿಯಿಂದ, ರೋಟರಿ ಪ್ರೌಢಶಾಲಾ ಭಗತ್ ಸಿಂಗ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಗೌರವಿಸಲಾಯಿತು.
ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಸ್ವಾಗತಿಸಿ, ವಂದಿಸಿದರು.
ಗೈಡ್ ಕ್ಯಾಪ್ಟನ್ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ನಿರೂಪಿಸಿದರು.