ಪಂಜ ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಪುಣ್ಚತ್ತಾರಿನಲ್ಲಿ ರಿಕ್ಷಾ ತಂಗುದಾಣ ಲೋಕಾರ್ಪಣೆ

0

“ತುರ್ತು ಸಮಯದಲ್ಲೂ ಸ್ಪಂದಿಸುವ ಗುಣ ರಿಕ್ಷಾ ಚಾಲಕರದ್ದು” : ಶಾಸಕಿ ಭಾಗಿರಥಿ ಮುರುಳ್ಯ

ಲಯನ್ಸ್ ಕ್ಲಬ್ ಪಂಜ ಇದರ ಸಹಭಾಗಿತ್ವದಲ್ಲಿ ಪುಣ್ಚತ್ತಾರು ಶ್ರೀಹರಿ ರಿಕ್ಷಾ ತಂಗುದಾಣವು ಜು.15 ರಂದು ಉದ್ಘಾಟನೆ ಗೊಂಡಿತು.

ಸುಮಾರು ರೂ 1,70ಲಕ್ಷ ವೆಚ್ಚದಲ್ಲಿ ಭಾಸ್ಕರ ಗೌಡ ಮುರುಳ್ಯ ರವರು ನಿರ್ಮಿಸಿಕೊಟ್ಟ ರಿಕ್ಷಾ ತಂಗುದಾಣವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿರರು.


ಬಳಿಕ ಅವರು ಮಾತನಾಡಿದ “ಎಷ್ಟೇ ಕಷ್ಟ ಇರಲಿ ಯಾವುದೇ ಸಮಸ್ಯೆ ಇರಲಿ ರಿಕ್ಷಾ ಚಾಲಕರು ತಕ್ಷಣ ಸ್ಪಂದಿಸುವ ಗುಣ ಹೊಂದಿರುತ್ತಾರೆ. ಅನೇಕ ತುರ್ತು ಸಂದರ್ಭದಲ್ಲಿಯೂ ಸಮಾಜದಲ್ಲಿ ರಿಕ್ಷಾ ಚಾಲಕರ ಪಾತ್ರ ಮಹತ್ತರವಾದದ್ದು, ಈ ನಿಟ್ಟಿನಲ್ಲಿ ರಿಕ್ಷಾ ಚಾಲಕರ ಸೇವೆಯನ್ನು ಗುರುತಿಸಿ ಮುರುಳ್ಯ ಭಾಸ್ಕರ ಗೌಡ ಇವರು ರಿಕ್ಷಾ ತಂಗುದಾಣವನ್ನು ಕೊಡುಗೆಯಾಗಿ ನೀಡಿದ್ದಾರೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜ ಲಯನ್ಸ್ ಕ್ಲಬ್ ನ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ವಹಿಸಿ ಮಾತನಾಡಿ “ಎಷ್ಟೋ ಮಂದಿ ಕೋಟ್ಯಾಧಿಪತಿಗಳಾಗಿದ್ದರು ಕೊಡುಗೈ ದಾನಿಗಳಾಗಿರುವುದಿಲ್ಲ ಇಂತಹ ಸನ್ನಿವೇಶದಲ್ಲಿಯೂ ರಿಕ್ಷಾ ಚಾಲಕರಿಗೆ ಸುಸಜ್ಜಿತ ತಂಗುದಾಣವನ್ನು ನಿರ್ಮಿಸಿ ಕೊಟ್ಟ ಭಾಸ್ಕರ ಗೌಡ ರವರು ಮಾದರಿಯಾಗಿದ್ದಾರೆ. ಇದರ ಸದುಪಯೋಗ ಪಡಿಸಿಕೊಂಡು ಪುಣ್ಚತ್ತಾರು ರಿಕ್ಷಾ ಚಾಲಕ ಮಾಲಕರ ಸಂಘವನ್ನು ಬೆಳೆಸಿಕೊಂಡು ಊರಿನ ಜನತೆಯ ಸೇವೆ ಮಾಡಿ”.ಎಂದು ಹೇಳಿದರು.
ಲಯನ್ಸ್ ಜಿಲ್ಲಾ ಪೂರ್ವ ಗವರ್ನರ್ ಡಾ. ಗೀತಾ ಪ್ರಕಾಶ್ ಶುಭ ಹಾರೈಸಿದರು.


ಲಯನ್ಸ್ ಜಿಲ್ಲಾ ಸಂಪುಟ ಸಂಯೋಜಕ ಲಯನ್ ಎಮ್ ಜೆ ಎಫ್ ಜಾಕೆ ಮಾಧವ ಗೌಡ ರವರು ದಾನಿಗಳಾದ ಭಾಸ್ಕರ ಗೌಡ ರವರಿಗೆ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ರಿಕ್ಷಾ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಗಣೇಶ್ ಉದನಡ್ಕ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ದಿನೇಶ್ ಪೈಕ ಭಜನಾ ಮಂಡಳಿ ಗೌರವಾಧ್ಯಕ್ಷ ನಾರಾಯಣ ಗೌಡ,ದಾನಿಗಳಾದ ಭಾಸ್ಕರ ಗೌಡ ಮುರುಳ್ಯ, ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ ದರ್ಖಾಸು, ಮಧುಕರ ಬೇಂಗಡ್ಕ, ರಿಕ್ಷಾ ಚಾಲಕ ಮಾಲಕ ಸಂಘದ ಕಾರ್ಯದರ್ಶಿ ಭರತ್ ರೈ,ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ,ಕೋಶಾಧಿಕಾರಿ ಆನಂದ ಗೌಡ ಉಪಸ್ಥಿತರಿದ್ದರು.


ಪಂಜ ಲಯನ್ಸ್ ಕ್ಲಬ್ ನ ಪ್ರಥಮ ಉಪಾಧ್ಯಕ್ಷ ಶಶಿಧರ್ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.