ಸುಬ್ರಹ್ಮಣ್ಯ – ಪುತ್ತೂರು ರಾಜ್ಯ ಹೆದ್ದಾರಿ ಕುಸಿಯುವ ಭೀತಿ

0

ಕುಮಾರಧಾರ ನದಿ ಬಳಿಯಲ್ಲಿ ಕುಸಿಯುತ್ತಿರುವ ರಸ್ತೆ

ಶಾಶ್ವತ ಪರಿಹಾರಕ್ಕೆ ಆಗ್ರಹ

ಸುಬ್ರಹ್ಮಣ್ಯದಿಂದ ಪಂಜ ಪುತ್ತೂರು ಮಂಜೇಶ್ವರ ಸಂಪರ್ಕಿಸುವ ಕರ್ನಾಟಕ ರಾಜ್ಯ ಹೆದ್ದಾರಿ ರಸ್ತೆ ಕುಮಾರಧಾರ ನದಿ ಬಳಿಯಲ್ಲಿ ಮಣ್ಣು ಸಡಿಲಗೊಂಡು ಮಳೆಗಾಲಲ್ಲಿ ನೀರು ರಸ್ತೆ ಅಡಿಯಿಂದ ಹರಿದು ಬರುತ್ತಿದ್ದು, ಯಾವುದೇ ಕ್ಷಣದಲ್ಲಿ ರಸ್ತೆ ಕುಸಿದು ಕುಮಾರಧಾರ ನದಿ ನೀರಿನ ಪಾಲಾಗುವ ಸಾಧ್ಯತೆ ಕಂಡು ಬಂದಿದೆ .

ಇತ್ತೀಚೆಗೆ ನಿಂದ ಸುರಿದ ಮಳೆಗೆ ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತಿದೆ. ಆದ್ದರಿಂದ ಆಸುಪಾಸಿನ ಮನೆಗಳಿಗೂ ಗಳಿಗೂ ಹಾನಿಯಾಗುವ ಲಕ್ಷಣಗಳು ಕಂಡುಬರುತ್ತಿದೆ.

ಇದೇ ಭಾಗದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಮನೆ ಕುಸಿದು ಎರಡು ಪುಟ್ಟಮಕ್ಕಳು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.


ಸುಬ್ರಹ್ಮಣ್ಯ ಮಂಜೇಶ್ವರ ಸಂಪರ್ಕಿಸುವ ರಾಜ್ಯ ರಸ್ತೆಯಲ್ಲಿ ಕುಮಾರಧಾರ ಬಳಿ ಸೇತುವೆ ಇದ್ದು ಈ ಸೇತುವೆಯು ವರ್ಷಂಪತಿ ಹಲವಾರು ಬಾರಿ ಮುಳುಗಡೆಯಾಗಿ, ಪುತ್ತೂರು,ಬಳ್ಪ, ಪಂಜ ಈ ಭಾಗದಿಂದ ಬರುವ ಹಲವಾರು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೀರಾ ತೊಂದರೆ ಆಗುತ್ತಿದೆ.
ಕಳೆದ ವಾರ ಬಂದ ಬಾರಿ ಮಳೆಗೆ ರಸ್ತೆ ಸಂಪೂರ್ಣ ಮುಳುಗಡೆಯಾಗಿತ್ತು ಕಾಲೇಜ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹರಸಾಹಸ ಪಟ್ಟು ನದಿ ನೀರನ್ನ ದಾಟಿ ಪರೀಕ್ಷೆ ಬರೆದಂತ ಘಟನೆ ನಡೆದಿದೆ.
ಈ ರಸ್ತೆಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಹಾಗೂ ಜನಪ್ರತಿನಿಧಿಗಳು ಇದರ ಬಗ್ಗೆ ಗಮನಹರಿಸಿ ಸೇತುವೆ ಹಾಗೂ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಬೇಕು ಹಾಗೂ ಭೂಕುಸಿತಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು, ಇಲ್ಲದೆ ಹೋದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪುತ್ತೂರು, ಬೆಳ್ಳಾರೆ ಕಡೆಯಿಂದ ಬರುವ ಕರ್ನಾಟಕ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯು ಕಡಿತುಕೊಳ್ಳುವ ಭೀತಿ ಇದೆ.