ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಆ. 03 ರಂದು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಅತಿಥಿಗಳಾಗಿ ಕಿರಣ್ ಕುಮಾರ್ ವಲಯ ಅರಣ್ಯಾಧಿಕಾರಿಗಳು ಪುತ್ತೂರು ಹಾಗೂ ಬೆಳ್ಳಾರೆ ಉಪವಲಯ ಅರಣ್ಯಾಧಿಕಾರಿಗಳಾದ ಪ್ರಸಾದ್ ಇವರು ಭಾಗವಹಿಸಿದರು.

ರೋಟರಿ ಅಧ್ಯಕ್ಷರಾದ ರೋ.ಬಿ. ಕೆ. ಶಶಿಧರ, ರೋ.ಎ.ಕೆ. ಮಣಿಯಾಣಿ , ರೋ. ರವೀಂದ್ರ ಗೌಡ, ರೋ.ಬಾಲಕೃಷ್ಣ ಮಡ್ತಿಲ, ರೊ. ಪ್ರಮೋದ್
ವೈಪಾಲ ಹಾಗೂ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದರು.