ಎಂ .ಜಿ. ಕಾವೇರಮ್ಮ ರಾಜ್ಯ ಮಟ್ಟದ ಅರೆಭಾಷೆ ಕವನ ಸ್ಪರ್ಧೆ ಫಲಿತಾಂಶ

0

ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಿದ ಐದನೇ ವರ್ಷದ ಸ್ಪರ್ಧೆ

 ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಿದ ಐದನೇ ವರ್ಷದ ಎಮ್.ಜಿ. ಕಾವೇರಮ್ಮ ರಾಜ್ಯ ಮಟ್ಟದ ಅರೆಭಾಷೆ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಸ್ಪರ್ಧೆಗೆ ಬಂದ ಮೂವತ್ತಕ್ಕಿಂತ

ಅಧಿಕ ಕವಿತೆಗಳಲ್ಲಿ ಮೊದಲ ಮೂರು ಕವಿತೆಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಪ್ರಥಮ ಕವಿತೆ, ಮಾತಾಡವ್ವಾ (ಬಿ. ಆರ್. ಜೋಯಪ್ಪ), ದ್ವಿತೀಯ, ನಾವ್ಗಿರದ ಬುದ್ಧಿ ( ಲೀಲಾ ದಯಾನಂದ) ತೃತೀಯ , ಸೂಟೆ ( ಜೀವನ್ ಪುರ) ಕವಿತೆಗಳು ಆಯ್ಕೆಯಾಗಿವೆ. ನಂತರದ ಸ್ಥಾನಗಳಲ್ಲಿ ಚತುರ್ಥ ,ನಾವ್ಗಿಲ್ಲೆ ಬೇರೆ ಆಯ್ಕೆ ( ಶಿವದೇವಿ ಅವನೀಶ್ಚಂದ್ರ ) ಮತ್ತು ಪಂಚಮ ಸ್ಥಾನದಲ್ಲಿ ರಾಯಲ್ ಚಾಲೆಂಜ್ ( ಚಂದ್ರಾವತಿ ಬಡ್ಡಡ್ಕ ) ಕವಿತೆಗಳು ಪಡೆದುಕೊಂಡಿವೆ. ತೀರ್ಪುಗಾರರಾಗಿ
ಪ್ರಸಿದ್ಧ ಲೇಖಕಿ ಶ್ರೀಮತಿ. ಲೀಲಾ ದಾಮೋದರ , ಮತ್ತು ಶ್ರೀಮತಿ. ಸಂಗೀತ ರವಿರಾಜ್ ಸಹಕರಿಸಿದರು. ಕವನ ಸ್ಪರ್ಧೆಯ ಪ್ರಥಮ ಸ್ಥಾನದ ಪ್ರಾಯೋಜಕರಾಗಿ ಎಡ್ಕೇರಿ ವಿಶ್ವನಾಥ್ ಮತ್ತು ತೃತೀಯ ಬಹುಮಾನವನ್ನು ಶ್ರೀಮತಿ. ಶೀಲಾ ಸೀತಾರಾಮ್ ನೀಡಿರುತ್ತಾರೆ. ಬಹುಮಾನ ವಿತರಣಾ ಕಾರ್ಯಕ್ರಮದ ವಿವರವನ್ನು ವಿಜೇತರಿಗೆ ಮತ್ತು ಸ್ಪರ್ಧಿಗಳಿಗೆ ತಿಳಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.