ಗುತ್ತಿಗಾರು: ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ

0

ಗುತ್ತಿಗಾರು ಪೇಟೆಯಲ್ಲಿ ಮೆರವಣಿಗೆಲ್ಲಿ ಸಾಗಿ, ಘೋಷಣೆ ಕೂಗಿ ಆಚರಣೆ

ಗುತ್ತಿಗಾರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಗ್ಗೆ ಸ್ವಾತಂತ್ರೋತ್ಸವ ಆಚರಣೆ ಮಾಡಲಾಯಿತು. ಎಸ್. ಡಿ.ಎಂ.ಸಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಧ್ವಜಾರೋಹಣ ಮಾಡಿದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುತ್ಲಾಜೆ, ಮುಖ್ಯೋಪಾಧ್ಯಾಯಿನಿ ಉಮಾವತಿ, ಸಹ ಶಿಕ್ಷಕರು, ಗ್ರಾಮ ಪಂಚಾಯತ್ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳು ಗುತ್ತಿಗಾರು ಪೇಟೆಯಲ್ಲಿ ಸ್ತಬ್ಧ ಚಿತ್ರ, ವಾದ್ಯ ಘೋಷಗಳೊಂದಿಗೆ, ಮೆರವಣಿಗೆಯಲ್ಲಿ ಸಾಗಿ ಸ್ವಾತಂತ್ರ್ಯೋತ್ಸವದ ಘೋಷಣೆ ಕೂಗಿದರು.