ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿ ಸುಳ್ಯ ನಗರದ ವಿವಿಧ ವಾರ್ಡುಗಳಿಗೆ ಪುತ್ತೂರು ಎಸಿ ಭೇಟಿ

0

ಮತಗಟ್ಟೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

ಮತದಾರರ ಪಟ್ಟಿ ಪರಿಷ್ಕರಣೆಯ ಸಂಬಂಧಿಸಿ ಸುಳ್ಯದಲ್ಲಿ ಅಧಿಕಾರಿಗಳು ನಡೆಸುತ್ತಿರುವ ಕಾರ್ಯದ ಬಗ್ಗೆ ಪುತ್ತೂರು ಸಹಾಯಕ ಆಯುಕ್ತರು ಗಿರೀಶ್ ನಂದನ್ ಇಂದು ನಗರದ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.


ಸುಳ್ಯ ನಗರದ ಬೂಡು, ಅಂಬಟಡ್ಕ,ಜೂನಿಯರ್ ಕಾಲೇಜ್ ಪರಿಸರ ಮುಂತಾದ ಕಡೆಗಳಿಗೆ ಮನೆ ಮನೆಗಳಿಗೆ ಭೇಟಿ ನೀಡಿರುವ ಅವರು ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಮಾಡುತ್ತಿರುವ ಮತಗಟ್ಟೆಯ ಅಧಿಕಾರಿಗಳಿಂದ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಪ್ರಗತಿ ಮಾಹಿತಿನ್ನು ಪರಿಶೀಲಿಸಿದ ಅವರು ಸಾರ್ವಜನಿಕರಿಗೆ ಮನೆ ಮನೆ ಬೇಟಿ ಕಾರ್ಯಕ್ರಮದ ಮಾಹಿತಿನ್ನು ನೀಡಿ ಜಾಗೃತಿ ಮೂಡಿಸಿರುತ್ತಾರೆ.

ಹಾಗೂ ತಾಲೂಕಿನ ಬೇರೆ ಬೇರೆ ಮತಗಟ್ಟೆ ವ್ಯಾಪ್ತಿಗಳಿಗೆ ಅವರು ಅನಿರೀಕ್ಷಿತ ಬೇಟಿ ನೀಡಲಿದ್ದು ಎಲ್ಲಾ ಮತಗಟ್ಟೆ ಅಧಿಕಾರಿಗಳು ಮನೆ ಮನೆ ಬೇಟಿ ಕಾರ್ಯವನ್ನು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸುವಂತೆ ಮತ್ತು ಮೇಲ್ವಿಚಾರಕರು ಪ್ರತಿದಿನ ಮೇಲ್ವಿಚಾರಣೆ ನಡೆಸಿ ವರದಿ ಮಾಡುವಂತೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್,ಕಂದಾಯ ನಿರೀಕ್ಷಕರು ,ಸುಳ್ಯ ಗ್ರಾಮಾಡಳಿತ ಅಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.