ಗುತ್ತಿಗಾರು : ಬೈಕ್ ಪಲ್ಟಿ, ಶಿಕ್ಷಕ ಶಶಿಧರ ಮಾವಿನಕಟ್ಟೆಯವರಿಗೆ ಗಾಯ

0

ಗುತ್ತಿಗಾರಿನ ಪ್ರಾಥಮಿಕ ಶಾಲಾ ಶಿಕ್ಷಕರಾದ ಶಶಿಧರ ಮಾವಿನಕಟ್ಟೆ ಅವರ ಬೈಕ್ ಪಲ್ಟಿಯಾಗಿ ಗಾಯಗೊಂಡ ಘಟನೆ ಆ.16 ರಂದು ವರದಿಯಾಗಿದೆ.

ಅಂದು ಸಂಜೆ 7 ಗಂಟೆ ಸುಮಾರಿಗೆ ಗುತ್ತಿಗಾರು ಆರೋಗ್ಯ ಕೇಂದ್ರದ ಕಡೆಯಿಂದ ಮುಖ್ಯ ರಸ್ತೆಗೆ ಬರುವಾಗ ಕಾಂಪ್ಲೆಕ್ಸ್ ಒಂದರ ಕಡೆ ಬೈಕ್ ಸಮೇತ ಬಿದ್ದಿದ್ದಾರೆ. ಶಶಿಧರ್ ಅವರು ಬಿದ್ದು ಅವರ ಮೇಲೆ ಬೈಕ್ ಬಿದ್ದ ಕಾರಣ ತೀವ್ರವಾಗಿ ಗಾಯವಾಗಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುವುದಾಗಿ ತಿಳಿದು ಬಂದಿದೆ.