ಸುಳ್ಯ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆ

0

ಸುಳ್ಯದ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ, ಭಾರತ ರತ್ನ ದಿ. ರಾಜೀವ್ ಗಾಂಧಿಯವರ 89ನೇ ಹಾಗೂ ಮಾಜಿ ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಹರಿಕಾರ ದಿ. ದೇವರಾಜ ಅರಸು ರವರ 108ನೇ ಜನ್ಮದಿನಾಚರಣೆಯನ್ನು ಸುಳ್ಯ ನಗರದ ಕಾಂಗ್ರೆಸ್ ಕಾರ್ಯಕರ್ತರು ಸುಳ್ಯ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಆಚರಿಸಿದರು.

ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿಸಿ ಜಯರಾಮ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಮಾಜಿಕ ಕಾರ್ಯಕರ್ತ, ಚಿಂತಕ ನಂದರಾಜ್ ಸಂಕೇಶ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ದಿ.ರಾಜೀವ್ ಗಾಂಧೀಯವರು ಆಧುನಿಕ ಭಾರತದ ಕನಸು ಕಂಡವರು ಮತ್ತು ಆ ದಿಶೆಯಲ್ಲಿ ಭಾರತ ಸರ್ಕಾರವನ್ನು ಮುನ್ನಡೆಸಿ ಅಭಿವೃದ್ಧಿಯ ಪಥದತ್ತ ಕೊಂಡೋಯ್ದರು.

ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಇಂಡಿಯಾದ ಕಾರ್ಯವನ್ನು ಭಾರತದಲ್ಲಿ ಪರಿಚಯಿಸಿ ಜಗತ್ತಿನಲ್ಲಿ ಇಂದು ಹೊಸ ಕ್ರಾಂತಿಯನ್ನು ಮಾಡಲು ಕಾರಣಿಕರ್ತರು ಇವರನ್ನು ಅವರ ಜನ್ಮದಿನದಂದು ಸ್ಮರಿಸುವುದು ಕಾಂಗ್ರೆಸ್ ಕಾರ್ಯಕರ್ತರಾದ ನಮ್ಮೆಲ್ಲರ ಹೊಣೆ ಯಾಗಿದೆ. ಅದೇ ರೀತಿ ಸಾಮಾಜಿಕ ಹರಿಕಾರ, ದೀನ ದಲಿತರ ಪರವಾಗಿ ಧೀಮಂತ ನಾಯಕತ್ವ ದೊಂದಿಗೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಏಳಿಗೆಗೆ ತಮ್ಮ ಜೀವನವನ್ನು ಮುಡುಡುಪಾಗಿಟ್ಟವರು ದಿ. ದೇವರಾಜ ಅರಸುರವರು. ಇಂತಹ ದೀಮಂತ ವ್ಯಕ್ತಿಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ನಾವೆಲ್ಲರೂ ಪ್ರತಿನಿತ್ಯ ಸ್ಮರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ಕೃಷ್ಣ ಸ್ವಾಮಿ ಕಂದಡ್ಕ,ಜೂಲಿಯ ಕ್ರಾಸ್ತ, ನಾರಾಯಣ ಜಟ್ಟಿಪಳ್ಳ, ಉಮ್ಮರ್ ಕುರುಂಜಿಗುಡ್ಡೆ, ಉಮ್ಮರ್ ಜಯನಗರ, ಅಜೀಜ್ ಹಳೇಗೇಟು,ಸಿದ್ದಿಕ್, ಹನೀಫ್, ಶ್ರೀಲತಾ ಕೇರ್ಪಳ, ಗಂಗಾಧರ ಮೇನಾಲ, ಉಪಸ್ಥಿತರಿದ್ದರು. ಭವಾನಿಶಂಕರ್ ಕಲ್ಮಡ್ಕ ಹಾಗೂ ಚೇತನ್ ಕಜೆಗದ್ದೆ ಕಾರ್ಯಕ್ರಮ ಆಯೋಜಿಸಿದ್ದರು.