ಪೇರಾಲು : ಸಾಮೂಹಿಕ‌ ಸತ್ಯನಾರಾಯಣ ಪೂಜೆ – ಧಾರ್ಮಿಕ ಉಪನ್ಯಾಸ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ತಾಲೂಕು ಅಜ್ಜಾವರ ವಲಯದ ಪೇರಲು ಅಂಬ್ರೊಟ್ಟಿ ಮಂಡೆಕೋಲು ಕಲ್ಲಡ್ಕ ಪೇರಾಲು ಎ ಒಕ್ಕೂಟದ ವತಿಯಿಂದ 19ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಈ ದಿನ ಪೇರಾಲು ಶ್ರೀರಾಮ ಸಭಾಭವನದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರಕಾಶ್ ಮೂಡಿತ್ತಾಯ ಉಪ ಪ್ರಾಂಶುಪಾಲರು ಸ ಪ ಪೂ ಕಾಲೇಜು, ಇವರು ಧಾರ್ಮಿಕ ಪ್ರವಚನವನ್ನು ಮಾಡಿದರು. ತಾಲೂಕಿನ ಯೋಜನಾಧಿಕಾರಿ ನಾಗೇಶ್ ಪಿ ಯೋಜನೆ ನಡೆದು ಬಂದ ದಾರಿಯ ವಿಶೇಷ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ನಿಕಟ ಪೂರ್ವ ಜನ ಜಾಗೃತಿ ತಾಲೂಕು ಅಧ್ಯಕ್ಷರು ಮಹೇಶ್ ರೈ, ಮಂಡೆಕೋಲು ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ, ಮಂಡೆಕೋಲು ಪೇರಾಲು ಎ ಕಲ್ಲಡ್ಕ ಒಕ್ಕೂಟದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದ ನಿರೂಪಣೆಯನ್ನು ವಲಯದ ಮೇಲ್ವಿಚಾರಕಿ ವಿಶಾಲ ಕೆ ಜಯಪ್ರಕಾಶ್ ನಿರೂಪಿಸಿದರು. ಉಪಾಧ್ಯಕ್ಷರಾದ ನವೀನ್ ಕುಮಾರ್ ರವರು ಸ್ವಾಗತಿಸಿ ಪೇರಾಲು ಒಕ್ಕೂಟದ ಸೇವಾ ಪ್ರತಿನಿಧಿ ವಾಣಿ ರವರು ಕಾರ್ಯಕ್ಷೇತ್ರದ ಸಾಧನೆಯ ವರದಿಯನ್ನು ಮಂಡಿಸಿ ಪೇರಾಲು ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್ ರವರು ವಂದನಾರ್ಪಣೆ ಮಾಡಿದರು.

ಈ ಸಂದರ್ಭ ನಾಲ್ಕು ಒಕ್ಕೂಟದ ಸರ್ವ ಸದಸ್ಯರು 700 ಮಂದಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಬಹಳ ಉತ್ತಮವಾಗಿ ನಡೆಯಿತು