ಮಂಗಳೂರಿನ ಯೂನಿಕ್ ವಲ್ಡ್೯ ಮತ್ತು ಫೆಂಟಾಸ್ಟಿಕ್ ವಲ್ಡ್೯ ಅಂಗಡಿಗಳ ಮೇಲೆ ದಾಳಿ ಮಾಡಿದ ಮಂಗಳೂರಿನ ಬರ್ಕೆ ಪೊಲೀಸರು 2.70 ಲಕ್ಷ ರೂ. ಮೌಲ್ಯದ ನಿಷೇಧಿತ ಇ-ಸಿಗರೇಟ್ ಸಹಿತ ನಾಲ್ವರನ್ನು ಬಂಧಿಸಿದ್ದು, ಬಂಧಿತರಲ್ಲಿ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೆಲ್ಲೂರು ಕೆಮ್ರಾಜೆ ಗ್ರಾಮದ ಸ್ವಾತಿ(26) ಎಂಬವರು ಬಂಧನಕ್ಕೊಳಗಾಗಿದ್ದಾರೆಂದು ತಿಳಿದು ಬಂದಿದೆ.
ಉಳಿದಂತೆ ಶಿವಕುಮಾರ್, ಶರೀಫ್, ರೆಹಮತುಲ್ಲಾ ಎಂಬ ಮೂವರು ಬಂಧಿತರಾಗಿದ್ದು ಇವರೆಲ್ಲ ಮಂಗಳೂರಿನವವರಾಗಿದ್ದಾರೆ ಎಂದು ತಿಳಿದು ಬಂದಿದೆ.