ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮೌಖಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನ ವಿಭಾಗದ ವತಿಯಿಂದ ನಿರಂತರ ಕಲಿಕಾ ಕಾರ್ಯಕ್ರಮದ ಭಾಗವಾಗಿ “ ಒರಲ್ ಪತೋಲಾಜಿ – ಬ್ಯಾಕಬೋನ್ ಅಫ್ ಕ್ಲಿನಿಕಲ್ ಡೆಂಟಿಸ್ಟ್ರಿ ” ಕಾರ್ಯಗಾರವನ್ನು ಸೆ. ೦2 ರಂದು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆರ್.ವಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು ಇದರ ಪ್ರಧ್ಯಾಪಕರಾದ ಡಾ. ಮಧುರ ಯಂ.ಜಿ. ಯವರು ಭಾಗವಹಿಸಿ ಕ್ಲಿನಿಕಲ್ ಡೆಂಟಿಸ್ಟ್ರಿ ಯಲ್ಲಿ, ಮೌಕಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದ ಉಪಯೋಗದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮವು ವಿದಾರ್ಥಿಗಳ ಪ್ರಾರ್ಥನೆಯೊಂದಿಗೆ ಅರಂಭಗೊಂಡಿತು. ವಿಭಾಗ ಮುಖ್ಯಸ್ಥೆ ಡಾ. ಶೈಲ ಪೈ ರವರು ವೇದಿಕೆಯ ಮೇಲಿನ ಗಣ್ಯರನ್ನು ಸ್ವಾಗತಿಸಿದರು. ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ.ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್ರವರು ಪ್ರಾಸ್ತವಿಕ ಮಾತನಾಡಿ ಶುಭಹಾರೈಸಿದರು. ದಂತ ಮಹಾವಿದ್ಯಾಲಯದ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಸುಪ್ರೀಯ ಹೆಚ್. ರವರು ರವರು ಸಂಪನ್ಮೂಲ ವ್ಯಕ್ತಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ. ಅನಿತಾ ದಯಕರ್ ರವರು ನೀಡಿದರು. ಡಾ. ಚ್ಯತನ್ಯ ಹಾಗೂ ವಿಭಾಗ ಸಿಬ್ಬಂದಿ ಸಹಕರಿಸಿಕರು. ಪ್ರಶ್ನೋತ್ತರದ ನಂತರ ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮ ಅಂತ್ಯಗೊಂಡಿತು.