ಅಂಜಲಿ ಮೊಟೆಂಸ್ಸರಿ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆ

0

ಸುಳ್ಯದ ಅಂಜಲಿ ಮೊಟೆಂಸ್ಸರಿ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆ ಸೆ.5ರಂದು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶುಭಕರ ಬಿ.ಸಿ.ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಪುಂಗವ ಗೌಡ ಹಾಗೂ ಶ್ರಿಮತಿ ಬಿ.ಗಂಗಮ್ಮ ಆಗಮಿಸಿದ್ದರು.

ಇವರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಹಾಗೂ ಅಂಜಲಿ ಮೊಟೆಂಸ್ಸರಿ ಸ್ಕೂಲ್‌ನ ಸಂಚಾಲಕಿ ಗೀತಾಂಜಲಿ ಟಿ.ಜಿ., ಶಿಕ್ಷಕಿ ನಿರ್ಮಲಾ, ಸಹಾಯಕಿ ಶ್ವೇತಾ ಇವರನ್ನು ಶಾಲಾ ಪೋಷಕರು, ಪುಟಾಣಿ ಮಕ್ಕಳು ಸನ್ಮಾನಿಸಿ, ಗೌರವಿಸಿದರು. ಪೋಷಕರಾದ ಶ್ರೀಮತಿ ಪ್ರಮೀಳಾ ಪ್ರಾರ್ಥಿಸಿ, ಶುಶಾನ್ ಸ್ವಾಗತಿಸಿ, ರಕ್ಷಿತಾ ಧನ್ಯವಾದ ಗೈದು, ಶ್ರೀಮತಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.