ಜಾಲ್ಸೂರು ಗ್ರಾಮದ ಮಹಾಬಲಡ್ಕ ನಿವಾಸಿ ಸುಬಣ್ಣ ನಾಯ್ಕ ಮಹಾಬಲಡ್ಕ ಅವರು ಅಸೌಖ್ಯದಿಂದಾಗಿ ಸೆ.7ರಂದು ಅಪರಾಹ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಕಾಲಿನಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ.23ರಂದು ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಾದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆ.25ರಂದು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಬಿ.ಪಿ. ಮತ್ತು ಶುಗರ್ ಇದ್ದುದರಿಂದ ಅಸೌಖ್ಯ ತೀವ್ರಗೊಂಡ ಕಾರಣ ಅವರ ಕಿಡ್ನಿ ಕೆಲಸ ಮಾಡುತ್ತಿರಲಿಲ್ಲವೆನ್ನಲಾಗಿದೆ.
ಇದರಿಂದ ವೈದ್ಯರ ಸೂಚನೆಯಂತೆ ಕಳೆದ ಕೆಲ ದಿನಗಳ ಹಿಂದೆ ಮನೆಗೆ ಕರೆತರಲಾಗಿತ್ತು. ಸೆ.7ರಂದು ಅಪರಾಹ್ನ ಮನೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪತ್ನಿ ಲಲಿತ, ಪುತ್ರ ದಯಾನಂದ ಎಂ.ಎಸ್., ಪುತ್ರಿಯರಾದ ರೇಖಾ, ಸುಮಿತ್ರ, ಪ್ರಮೀಳ, ಸಹೋದರರಾದ ತಿಮ್ಮಣ್ಣ ನಾಯ್ಕ ಮಹಾಬಲಡ್ಕ, ದಾಮೋದರ ಮಹಾಬಲಡ್ಕ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.