ಎಲಿಮಲೆಯ ಮಿತ್ರ ಬಳಗದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ಸಭಾ ಕಾರ್ಯಕ್ರಮ – ಕ್ರೀಡಾ ಸ್ಪರ್ಧೆಗಳು – ಸಾಂಸ್ಕೃತಿಕ ಕಾರ್ಯಕ್ರಮ

ರಾತ್ರಿ ರಂಜಿಸಿದ ನಾಟಕ ಪ್ರದರ್ಶನ

ಎಲಿಮಲೆಯ‌ ಮಿತ್ರ ಬಳಗದ ವತಿಯಿಂದ
37ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಸೆ.6ರಂದು ಸ.ಹಿ.ಪ್ರಾ.ಶಾಲೆ ದೇವಚಳ್ಳದಲ್ಲಿ ನಡೆಯಿತು.

ಕಾರ್ಯಕ್ರಮ ವನ್ನು ದೇವಚಳ್ಳ ಗ್ರಾ.ಪಂ. ಮಾಜಿ ಸದಸ್ಯೆ ಶ್ರೀಮತಿ ರುಕ್ಮಿಣಿ‌ ಕಲ್ಲುಪಣೆ ದೀಪ‌ ಬೆಳಗಿಸಿ ಉದ್ಘಾಟಿಸಿದರು.


ದೇವಚಳ್ಳ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಧರ ಗೌಡ, ದೇವಚಳ್ಳ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಾನಂದ ಪಟ್ಟೆ, ಗ್ರಾ.ಪಂ. ಸದಸ್ಯೆ ಪ್ರೇಮಾಲತಾ ಕೇರ ಮುಖ್ಯ ಅತಿಥಿಗಳಾಗಿದ್ದರು.

ಬಳಿಕ ಕಾರ್ಯಕ್ರಮದ ಪ್ರಯುಕ್ತ ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.‌

ಸಂಜೆ ಬಹುಮಾನ ವಿತರಣೆ ಮತ್ತು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು‌ ಮಿತ್ರ ಬಳಗದ ಅಧ್ಯಕ್ಷ ಉದಯ ಚಳ್ಳ ವಹಿಸಿದ್ದರು. ಅರಂಬೂರು ಕಂಚಿ ಕಾಮಕೋಟಿ ವೇದ ಮಹಾವಿದ್ಯಾಲಯದ ಪ್ರಚಾರ್ಯರಾದ ವೆಂಕಟೇಶ ಶಾಸ್ತ್ರಿ ಧಾರ್ಮಿಕ ಉಪನ್ಯಾಸ ‌ನೀಡಿದರು. ವೇದಿಕೆಯಲ್ಲಿ ಸುಳ್ಯ ಶಾಸಕಿ ಕು| ಭಾಗೀರಥಿ ಮುರುಳ್ಯ, ಸುಳ್ಯ ತಾಲೂಕು ಸಂಘ ಸಂಚಾಲಕ‌ ಚಂದ್ರಶೇಖರ ಭಟ್ ತಳೂರು, ಜ್ಞಾನದೀಪ‌ ವಿದ್ಯಾಸಂಸ್ಥೆ ಯ ಸಂಚಾಲಕ ಎ.ವಿ.ತೀರ್ಥರಾಮ, ದಯಾನಂದ ಡಿ.ಟಿ., ಮಿತ್ರ ಬಳಗದ ಕಾರ್ಯದರ್ಶಿ ನಿತಿನ್‌ ಗಟ್ಟಿಗಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ‌‌


ಇದೇ ಸಂದರ್ಭದಲ್ಲಿ ಶಾಸಕಿ‌ ಭಾಗೀರಥಿ‌ ಮುರುಳ್ಯರವರನ್ನು ಮಿತ್ರ ಬಳಗದ ವತಿಯಿಂದ‌ ಸನ್ಮಾನಿಸಲಾಯಿತು.

ರಾತ್ರಿ ನಮ್ಮ ಕಲಾವಿದೆರ್ ಬೆದ್ರ ಇವರಿಂದ ಹಾಸ್ಯಮಯ ನಾಟಕ ಕುಸಲ್ದ ಗೊಬ್ಬು ನಾಟಕ ಪ್ರದರ್ಶನ ಜ್ಞಾನದೀಪ‌ ವಿದ್ಯಾಸಂಸ್ಥೆ ಮೈದಾನದಲ್ಲಿ ನಡೆಯಿತು.
ವೆಂಕಟ್ ಕಲ್ಲುಪಣೆ ವಂದಿಸಿದರು. ಕಿರಣ್ ಗುಡ್ಡೆಮನೆ‌ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಓಂ ಪ್ರಕಾಶ್ ಕಜೆ, ಉಪಾಧ್ಯಕ್ಷ ದೀಕ್ಷಿತ್ ಎಲಿಮಲೆ, ಸಾಂಸ್ಕೃತಿಕ ಕಾರ್ಯದರ್ಶಿ ಕುಲದೀಪ್ ಹರ್ಲಡ್ಕ, ಕ್ರೀಡಾ ಕಾರ್ಯದರ್ಶಿ ಶೃಜೇಶ್ ಕಲ್ಲುಪಣೆ, ಕೋಶಾಧಿಕಾರಿ ಪ್ರಶಾಂತ್ ಅಂಬೆ ಕಲ್ಲು, ಜೊತೆ ಕಾರ್ಯದರ್ಶಿ ತೀಥೇಶ್ವರ ಗುಡ್ಡನಮನೆ, ಜಯಂತ್ ಸುಳ್ಳಿ‌ ಸೇರಿದಂತೆ ಬಳಗದ ಸದಸ್ಯರು ಊರವರು‌ ಉಪಸ್ಥಿತರಿದ್ದರು. ‌