ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಂಜ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಯಲ್ಲಿ ಪಂಬೆತ್ತಾಡಿ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಶಾಲೆಗೆ ಹಿರಿಯ ವಿಭಾಗದ ದ್ವಿತೀಯ ಸಮಗ್ರ ಪ್ರಶಸ್ತಿ ಬಂದಿರುತ್ತದೆ. ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದ ಕಥೆ ಹಂಸಿನಿ (ಪ್ರಥಮ), ಕ್ಲೇ ಮಾಡೆಲಿಂಗ್ ರಶ್ಮಿತ್ .ಪಿ.ಯು.( ಪ್ರಥಮ) , ಕನ್ನಡ ಕಂಠಪಾಠ ಅನೀಶ್ ಕಲ್ಚಾರು (ದ್ವಿತೀಯ), ಸಂಸ್ಕೃತ ಧಾರ್ಮಿಕ ಪಠಣ ಅನೀಶ್ ಕಲ್ಚಾರು (ದ್ವಿತೀಯ), ಲಘುಸಂಗೀತ ಕೌಶಿಕ್.ಕೆ (ದ್ವಿತೀಯ), ಚಿತ್ರಕಲೆ ಶಮಿತ್ (ತೃತೀಯ), ಹಂಸಿನಿ ಅಭಿನಯ ಗೀತೆ (ತೃತೀಯ) . ಕಿರಿಯರ ವಿಭಾಗದ ಕನ್ನಡ ಕಂಠಪಾಠ ಹಂಸಿಕಾ.ಕೆ.ಎಲ್ (ತೃತೀಯ) ,ಕಥೆ ಮೋಹನ್ ಕುಮಾರ್ (ತೃತೀಯ) ಸ್ಥಾನ ಪಡೆದುಕೊಂಡರು.