ಹಳೆಗೇಟು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ 40 ನೇ ವರ್ಷದ ಗಣೇಶೋತ್ಸವ ಆಚರಣೆ

0


ಸುಳ್ಯದ ಹಳೆಗೇಟು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ೪೦ ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆ ಸೆ.೧೯ ರಂದು ಆರಂಭಗೊಂಡು ಸೆ.೨೧ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ಸೆ.೧೯ರಂದು ಪೂರ್ವಾಹ್ನ ಗಣಪತಿ ಹೋಮ ನಡೆದು ಬಳಿಕ ವಿಗ್ರಹ ಪ್ರತಿಷ್ಠಾಪನೆ ನಡೆಯುವುದು. ಸಂಜೆ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರದಿಂದ ಭಜನಾ ಕಾರ್ಯಕ್ರಮ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಸೆ.೨೦ರಂದು ಸಂಜೆ ಗಜಾನನ ಭಜನಾ ಸಂಘ ಜಯನಗರ ಇವರಿಂದ ಭಜನೆ ನಡೆಯುವುದು. ಸೆ.೨೧ರಂದು ಅಪರಾಹ್ನ ಸಾರ್ವಜನಿಕ ಅನ್ನಪ್ರಸಾದ ಸಂತರ್ಪಣೆ ನಡೆಯುವುದು. ಸಂಜೆ ೫ ರಿಂದ ವೈಭವದ ಶೋಭಾಯಾತ್ರೆ. ಸುಳ್ಯ ನಗರದಲ್ಲಿ ನಡೆದು, ಬ್ರಹ್ಮರಗಯದ ಬಳಿ ಜಲಸ್ತಂಭನಗೊಳ್ಳಲಿದೆ. ಪ್ರತೀ ದಿನ ಮಧ್ಯಾಹ್ನ ಮತ್ತು ರಾತ್ರಿ ದೇವರಿಗೆ ಮಹಾಪೂಜೆ ನಡೆಯುವುದು.
ಸೆ.೧೯ರಂದು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಳ್ಯದ ಫ್ಯೂಶನ್ ಡಾನ್ಸ್ ಇದರ ನೃತ್ಯ ಪಟುಗಳಿಂದ ಹಾಗೂ ಚಿಣ್ಣರ ಕಲರವದ ಮೆರುಗು ನಡೆಯುವುದು.
ಸೆ.೨೦ರಂದು ರಾತ್ರಿ ಸಂಗೀತ ರಸಮಂಜರಿ ರಾಗ್ ಮೆಲೋಡಿಸ್ ದಕ್ಷಿಣ ಕನ್ನಡದ ಆಯ್ದ ನುರಿತ ಕಲಾವಿದರಿಂದ ಭಕ್ತಿ, ಭಾವ, ಹಾಗೂ ಚಿತ್ರಗೀತೆಗಳ ಸಂಗಮ ನಡೆಯುವುದು.