ಸೆ.18-19 : ಪೇರಾಲು-ಮೈತಡ್ಕದಲ್ಲಿ 30 ನೇ ವರ್ಷದ ಗಣೇಶೋತ್ಸವ ಗೀತ ಸಾಹಿತ್ಯ ಸಂಭ್ರಮ ಹಾಗೂ `ಮಕ್ಕರ್’ ತುಳು ನಾಟಕ

0

ಮಂಡೆಕೋಲು ಗ್ರಾಮದ ಪೇರಾಲು – ಮೈತಡ್ಕದ ಪಯಸ್ವಿನಿ ಕ್ರೀಡಾ ಮತ್ತು ಕಲಾ ಸಂಘ ಮತ್ತು ಪಯಸ್ವಿನಿ ಯುವತಿ ಸಂಘದ ಆಶ್ರಯದಲ್ಲಿ ೩೦ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. ೧೮ ಮತ್ತು ೧೯ರಂದು ಮೈತಡ್ಕ ಶಾಲಾ ವಠಾರದಲ್ಲಿ ನಡೆಯಲಿದೆ.
ಸೆ.೧೯ರಂದು ಬೆಳಗ್ಗೆ ಶ್ರೀಗಣಪತಿ ಹವನ ಮತ್ತು ಗಣಪತಿ ಪ್ರತಿಷ್ಠೆ. ಬಳಿಕ ಭಜನಾ ಕಾರ್ಯಕ್ರಮ ಶ್ರೀ ಅಣ್ಣಪ್ಪ ಸ್ವಾಮಿ ಸೇವಾ ಸಮಿತಿ ಕಜಲ, ಪೇರಾಲು -ಮೈತಡ್ಕ ಇವರಿಂದ. ಬಳಿಕ ಪುರುಷರಿಗೆ, ಮಹಿಳೆಯರಿಗೆ ಸ್ಪರ್ಧಾ ಕಾರ್ಯಕ್ರಮ ನಡೆಯುವುದು. ಸಂಜೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯುವುದು. ಸಂಜೆ ೫ ರಿಂದ ನೂತನ ಸಮಿತಿ ರಚನೆಯಾಗುವುದು. ಬಳಿಕ ಶ್ರೀ ಗಣಪತಿಯ ಜಲಸ್ತಂಭನಾ ಮೆರವಣಿಗೆ ನಡೆಯುವುದು.
ಸೆ.೧೮ರಂದು ಸಾಂಸ್ಕೃತಿಕ ಕಾರ್ಯಕ್ರಮ :
ಗಣೇಶೋತ್ಸವದ ಅಂಗವಾಗಿ ಸೆ.೧೮ರಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. ಸಂಜೆ ೬ರಿಂದ ಸ್ಥಳೀಯ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ರಾತ್ರಿ ಗೀತ ಸಾಹಿತ್ಯ ಸಂಭ್ರಮ ವಿಠಲ ನಾಯಕ್ ಮತ್ತು ಬಳಗದವರಿಂದ ನಡೆಯುವುದು. ಬಳಿಕ ತುಳು ನಾಟಕ ಮಕ್ಕರ್. ನಮ್ಮ ಟಿವಿ ಬಲೆ ತೆಲಿಪಾಲೆ ಕಲಾವಿದರ ಅಭಿನಯದಲ್ಲಿ ಮೂಡಿ ಬರಲಿದೆ.