ಪೇರಾಲು-ಮೈತಡ್ಕದಲ್ಲಿ30 ನೇ ವರ್ಷದ ಗಣೇಶೋತ್ಸವ

0

ಮಂಡೆಕೋಲು ಗ್ರಾಮದ ಪೇರಾಲು – ಮೈತಡ್ಕದ ಪಯಸ್ವಿನಿ ಕ್ರೀಡಾ ಮತ್ತು ಕಲಾ ಸಂಘ ಮತ್ತು ಪಯಸ್ವಿನಿ ಯುವತಿ ಸಂಘದ ಆಶ್ರಯದಲ್ಲಿ ೩೦ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 18 ರಂದು ಆರಂಭಗೊಂಡಿತು.
ಸೆ.19ರಂದು ಬೆಳಗ್ಗೆ ಶ್ರೀಗಣಪತಿ ಹವನ ಮತ್ತು ಗಣಪತಿ ಪ್ರತಿಷ್ಠೆ. ಬಳಿಕ ಭಜನಾ ಕಾರ್ಯಕ್ರಮ ಶ್ರೀ ಅಣ್ಣಪ್ಪ ಸ್ವಾಮಿ ಸೇವಾ ಸಮಿತಿ ಕಜಲ, ಪೇರಾಲು -ಮೈತಡ್ಕ ಇವರಿಂದ. ಬಳಿಕ ಪುರುಷರಿಗೆ, ಮಹಿಳೆಯರಿಗೆ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಸಂಜೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯುವುದು. ಸಂಜೆ ೫ ರಿಂದ ನೂತನ ಸಮಿತಿ ರಚನೆಯಾಗುವುದು. ಬಳಿಕ ಶ್ರೀ ಗಣಪತಿಯ ಜಲಸ್ತಂಭನಾ ಮೆರವಣಿಗೆ ನಡೆಯುವುದು.