ಸುಬ್ರಹ್ಮಣ್ಯ ಮಹಿಳಾ ಸೊಸೈಟಿ ಮಹಾಸಭೆ, 62.2 ಕೋಟಿ ವ್ಯವಹಾರ, 8.63 ಲಕ್ಷ ಲಾಭ, 7% ಡಿವಿಡೆಂಟ್

0

ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸೆ‌. 21ರಂದು ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್. ರೈಯವರ ಅಧ್ಯಕ್ಷತೆಯಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ.ನ ರಾಜೀವ್ ಗಾಂಧಿ ಸೇವಾ ಕೇಂದ್ರದ ಕುಮಾರಧಾರಾ ಸಭಾಂಗಣದಲ್ಲಿ ನಡೆಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಾರಿಜಾಕ್ಷಿ ಪಿ. ವರದಿ ವಾಚಿಸಿದರು. ಸಂಘವು ವರದಿ ಸಾಲಿನಲ್ಲಿ 62.2 ಕೋಟಿ ವ್ಯವಹಾರ ನಡೆಸಿ 8.63 ಲಕ್ಷ ಲಾಭ ಗಳಿಸಿದೆ.

ಸದಸ್ಯರಿಗೆ 7% ಡಿವಿಡೆಂಟ್ ವಿತರಿಸಲಾಗುವುದು ಎಂದರು. ಸಂಘದ ಉಪಾಧ್ಯಕ್ಷೆ ಶ್ರೀಮತಿ ಲೀಲಾ ಮನಮೋಹನ್, ನಿರ್ದೇಶಕರಾದ ಶ್ರೀಮತಿ ಶಶಿಕಲಾ ಎಸ್ ಶೆಟ್ಟಿ, ಶ್ರೀಮತಿ ವಿಮಲಾ ರಂಗಯ್ಯ, ಶ್ರೀಮತಿ ಚಂದ್ರಾಕ್ಷಿ ಜೆ. ರೈ, ಶ್ರೀಮತಿ ನಾಗವೇಣಿ. ಎಸ್, ಶ್ರೀಮತಿ ಲೀಲಾವತಿ ಯು, ಶ್ರೀಮತಿ ಫಮೀದಾ ಸಂಶುದ್ದೀನ್, ಶ್ರೀಮತಿ ಅನಸೂಯ ಬಿ. ಎ, ಶ್ರೀಮತಿ ಸುವರ್ಣಿನಿ ಎನ್.ಎಸ್, ಶ್ರೀಮತಿ ಶೋಭಾ ನಲ್ಲೂರಾಯ, ಶ್ರೀಮತಿ ಭವಿತಾ ವೈ. ಶೆಟ್ಟಿ, ಶ್ರೀಮತಿ ಸುಜಾತ ಗಣೇಶ್, ಶ್ರೀಮತಿ ಪದ್ಮಾವತಿ. ಎ, ಶ್ರೀಮತಿ ಪ್ರಮುಲ್ಲಾ ಪಿ. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದಲ್ಲಿ 38 ವರ್ಷಗಳಿಂದ ನಿರ್ದೇಶಕಿಯಾಗಿ, ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶಶಿಕಲಾ ಎಸ್. ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆ. 31ರಂದು ನಿವೃತ್ತರಾದ ನಾಗೇಶ್ ಶೆಟ್ಟಿಯವರಿಗೆ ಬೀಳ್ಕೊಡುಗೆ ನಡೆಯಿತು. ಶ್ರೀಮತಿ ವಿಮಲಾ ರಂಗಯ್ಯ ಮತ್ತು ಲೆಕ್ಕಿಗರಾದ ಶ್ರೀಮತಿ ಸಂಧ್ಯಾ ಸಿ. ರಾವ್ ಸನ್ಮಾನಪತ್ರ ವಾಚಿಸಿದರು. ಬೆಳ್ಳಾರೆ ಶಾಖಾ ವ್ಯವಸ್ಥಾಪಕರಾದ ಬ್ರಿಜೇಶ್ ರೈ ಪಿ. ನಾಗೇಶ್ ಶೆಟ್ಟಿಯವರ ಅನಿಸಿಕೆಗಳನ್ನು ಓದಿ ಹೇಳಿದರು. ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್.ರೈ ಸ್ವಾಗತಿಸಿ, ಉಪಾಧ್ಯಕ್ಷೆ ಶ್ರೀಮತಿ ಲೀಲಾ ಮನಮೋಹನ್ ವಂದಿಸಿದರು. ಸಿಬ್ಬಂದಿ ವರ್ಗ ಸಹಕರಿಸಿದರು. ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.