ಚೊಕ್ಕಾಡಿಯಲ್ಲಿ ನಡೆಯಲಿರುವ ಭಜನೋತ್ಸವದ ಪೂರ್ವ ಭಾವಿ ಸಭೆ

0

ಸುಳ್ಯ ತಾಲೂಕು ಭಜನಾ ಪರಿಷತ್ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಭಜಕರ ಸಂಘಟನೆಗಾಗಿ ತಾಲೂಕು ಮಟ್ಟದ ಭಜನೋತ್ಸವವನ್ನು ಚೊಕ್ಕಾಡಿಯಲ್ಲಿ ನಡೆಸಲು ತೀರ್ಮಾನಿಸಿದ್ದು ಇದರ ಪೂರ್ವ ಭಾವಿ ಸಭೆಯನ್ನು ಚೊಕ್ಕಾಡಿ ಶ್ರೀ ರಾಮ ದೇವಾಲಯದ ದೇಸಿ ಭವನದಲ್ಲಿ ಸೆ.26 ರಂದು ನಡೆಸಲಾಯಿತು.

ಭಜನೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೋಡ್ತುಗುಳಿ ಅಧ್ಯಕ್ಷತೆ ವಹಿಸಿದ್ದರು. ನ. 26 ರಂದು ತಾಲೂಕಿನ ಭಜನಾ ಮಂಡಳಿಯ ಸದಸ್ಯರನ್ನು ಒಟ್ಟು ಸೇರಿಸಿ ಸಂಘಟನೆಯಉದ್ದೇಶದಿಂದ ಭಜನೋತ್ಸವ ಕಾರ್ಯಕ್ರಮಹಮ್ಮಿಕೊಳ್ಳುವ ಬಗ್ಗೆ ವಿಚಾರ ಪ್ರಸ್ತಾಪಿಸಲಾಯಿತು. ಬೆಳಗ್ಗೆ ಭಜನಾ ಮೆರವಣಿಗೆ ಹಾಗೂ ಸಾಮೂಹಿಕ ಭಜನೆ ಮತ್ತು ಭಜನಾ ತರಬೇತುದಾರರಿಂದ ತರಬೇತಿ ಕಮ್ಮಟದ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಿ ಜವಬ್ದಾರಿ ಹಂಚಿಕೆ ಮಾಡಲಾಯಿತು. ತಾಲೂಕು ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ,ಅಧ್ಯಕ್ಷ ಯತೀಶ್ ರೈ ದುಗಲಡ್ಕ, ಗೌರವ ಸಲಹೆಗಾರರಾದ ಬಾಲಕೃಷ್ಣ ಬೊಳ್ಳೂರು, ಮಹೇಶ್ ಚೂಂತಾರು, ಪಂಚಾಯತ್ ಉಪಾಧ್ಯಕ್ಷೆ ಭುವನೇಶ್ವರಿ ಪದವು, ಕಾರ್ಯದರ್ಶಿ ಸತೀಶ್ ಕಲ್ಮಕ್ಕಾರು, ಖಜಾಂಜಿ ಮಹೇಶ್ ಮೇರ್ಕಜೆ, ನಿರ್ದೇಶಕ ದಯಾನಂದ ಕೊರತ್ತೋಡಿ, ಮೇಲ್ವಿಚಾರಕ ಕೃಷ್ಣಪ್ಪ‌, ಒಕ್ಕೂಟದ ಅಧ್ಯಕ್ಷ ವೀಣಾ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಹರ್ಷಿತಾ ಪ್ರಾರ್ಥಿಸಿದರು. ಸವಿತಾ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ಕಲ್ಮಕ್ಕಾರು ವಂದಿಸಿದರು. ಮೇಲ್ವಿಚಾರಕ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.

ಭಜನೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಪರಿಷತ್ ನಿರ್ದೇಶಕರು, ವಲಯದ ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.