ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ 30ಕ್ಕೂ ಹೆಚ್ಚು ಸಾಂಸ್ಕೃತಿಕ ಸ್ಪರ್ಧೆಗಳು
ಮೊಗರ್ಪಣೆ ಎಚ್ ಐ ಜೆ ಕಮಿಟಿ ಆಶ್ರಯದಲ್ಲಿ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸದ ವಿದ್ಯಾರ್ಥಿಗಳಿಂದ ಇಝ್ಧಿಹಾರ್ ಮೀಲಾದ್ ಫೆಸ್ಟ್ 2023 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ನೆರವೇರಿಸಿದರು.
ಸ್ಥಳೀಯ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಸಿಎಂ ಉಸ್ಮಾನ್, ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಕೋಶಾಧಿಕಾರಿ ಮಹಮ್ಮದ್ ಆದರ್ಶ, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಹನೀಫ್, ಹಾಗೂ ಮದರಸ ಅಧ್ಯಾಪಕರುಗಳು ಉಪಸ್ಥಿತರಿದ್ದರು.
ಮದರಸ ಮುಖ್ಯ ಗುರುಗಳಾದ ಅಬ್ದುಲ್ ಕರೀಂ ಸಕಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು 30ಕ್ಕೂ ಹೆಚ್ಚು ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸದರ್ ಮಅಲ್ಲಿಮ್ ಅಬ್ದುಲ್ ಕರೀಂ ಸಕಾಫಿ, ಅಧ್ಯಾಪಕರುಗಳಾದ ಅಬ್ದುಲ್ ನಾಸಿರ್ ಸಕಾಫಿ,ಸಿದ್ದೀಕ್ ಸಅದಿ ಸ್ಪರ್ಧಾ ಕಾರ್ಯಕ್ರಮಗಳ ನಿರೂಪಕರಾಗಿ ಸಹಕರಿಸಿದರು.
ನಿರ್ಣಾಯಕರಾಗಿ ಎಸ್ ಜೆ ಎಂ ಸುಳ್ಯ ಸುಳ್ಯ ರೇಂಜ್ ಅಧ್ಯಕ್ಷರಾದ ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಅನ್ಸಾರ್ಯ ಎಜುಕೇಶನಲ್ ಸೆಂಟರ್ ಇದರ ಮ್ಯಾನೇಜರ್ ಮೊಹಮ್ಮದ್ ಉವೈಸ್ ಸಹಕರಿಸಿದರು.
ಸ್ಥಳಿಯ ಮದರಸ ಅಧ್ಯಾಪಕರುಗಳಾದ ಯೂಸುಫ್ ನಿಝಾಮಿ, ಹಂಝ ಸಕಾಫಿ, ಅಬ್ದುಲ್ ರಶೀದ್ ಝೈನಿ,ಮೂಸಾ ಮುಸ್ಲಿಯಾರ್,ಶಫೀಕ್ ಸಕಾಫಿ ಜಯನಗರ ಸಹಕರಿಸಿದರು.
ಈ ಸಂದರ್ಭದಲ್ಲಿ ಜಮಾಅತ್ ಕಮಿಟಿಯ ಪದಾಧಿಕಾರಿಗಳು ಸದಸ್ಯರು,ಮೀಲಾದ್ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.