ಸುಳ್ಯದಲ್ಲಿ ಮರಾಟಿ ಸಮುದಾಯದ ಯುವಕ ಯುವತಿಯರಿಗೆ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಉದ್ಘಾಟನೆ

0


ಮರಾಟಿ ಸಮಾಜ ಸೇವಾ ಸಂಘ ತಾಲೂಕು, ಮರಾಟಿ ಮಹಿಳಾ ವೇದಿಕೆ ಸುಳ್ಯ ತಾಲೂಕು ಇದರ ಸಹಕಾರದೊಂದಿಗೆ ಮರಾಟಿ ಯುವ ವೇದಿಕೆ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಸಂಘಟನೆ ನಾಯಕತ್ವ ಹಾಗೂ ಪರಿಣಾಮಕಾರಿ ಭಾಷಣ ಕಲೆ ವಿಷಯವಾಗಿ ಸ್ಪೂರ್ತಿ ಎಂಬ 2 ದಿನಗಳ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಸುಳ್ಯದ ಗಿರಿದರ್ಶಿನಿ ಮರಾಟಿ ಸಮುದಾಯ ಭವನದಲ್ಲಿ ಇಂದು ಉದ್ಘಾಟನೆಗೊಂಡಿತು.


ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಜಿ. ದೇವಪ್ಪ ನಾಯ್ಕ ಹೊನ್ನೇಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಜನಾರ್ಧನ ಬಿ. ಕುರುಂಜಿಭಾಗ್ ವಹಿಸಿದ್ದರು.ಅತಿಥಿಗಳಾಗಿ ಸುಳ್ಯ ಮೆಸ್ಕಾಂನ ಎ.ಇ.ಇ. ಹರೀಶ್ ನಾಯ್ಕ್ ಭಾಗವಹಿಸಿದ್ದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗಿರಿಜಾ ಯಂ. ವಿ., ಮರಾಟಿ ಸಮಾಜದ ಸೇವಾ ಸಂಘದ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಯುವ ವೇದಿಕೆಯ ಅಧ್ಯಕ್ಷ ಮೋಹನ್ ನಾಯ್ಕ್ ಪೆರಾಜೆ, ಮಹಿಳಾ ವೇದಿಕೆ ಕಾರ್ಯದರ್ಶಿ ಕುಸುಮ ಜನಾರ್ದನ ನಾಯ್ಕ್ ಕೇರ್ಪಳ ಉಪಸ್ಥಿತರಿದ್ದರು. ತರಬೇತುದಾರರಾದ
ರಾಷ್ಟ್ರೀಯ ತರಬೇತುದಾರ ಡಾ.ಜೇಸಿ
ಟಿ. ಕೃಷ್ಣಮೂರ್ತಿ ಉಜಿರೆ ಹಾಗೂ ಜೇಸಿ ಚಂದ್ರಶೇಖರ ಸಿ.ಬಿಳಿನೆಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುವ ವೇದಿಕೆಯ ಅಧ್ಯಕ್ಷ ಮೋಹನ್ ಪೆರಾಜೆ ಸ್ವಾಗತಿಸಿ ,ಸದಸ್ಯ ಅಶೋಕ್ ದೊಡ್ಡೇರಿ ವಂದಿಸಿದರು. ಜತೆಕಾರ್ಯದರ್ಶಿ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಇಂದು ಮತ್ತು ನಾಳೆ ತರಬೇತಿ ಶಿಬಿರ ಕಾರ್ಯಾಗಾರ ನಡೆಯಲಿದೆ.