ಮೂಡ್ನೂರು ಮರ್ಕಂಜ ಶಾಲೆಯಲ್ಲಿ ಗೈಡ್ಸ್ ದಳ ಉದ್ಘಾಟನೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ನೂರು ಮರ್ಕಂಜ ಶಾಲೆಯಲ್ಲಿ ಗೈಡ್ಸ್ ದಳ ಉದ್ಘಾಟನೆ ಅ.5ರಂದು ನಡೆಯಿತು.

ಭಾರತ ಸ್ಕೌಟ್ ಗೈಡ್ಸ್ ಇದರ ಗೌರವ ಅಧ್ಯಕ್ಷ ಬಾಪು ಸಾಹೇಬ್ ಉದ್ಘಾಟಿಸಿ, ಶುಭ ಹಾರೈಸಿದರು ಅತಿಥಿ ಗಳಾಗಿ ಭಾರತ್ ಗೈಡ್ಸ್ ನ ಕಾರ್ಯದರ್ಶಿ ಪ್ರೇಮಲತಾ, ಸ್ಕಾ ಟಾರ್ ಪ್ರತಿ ನಿಧಿ ಚಂದ್ರವತಿ, ಸ. ಮಾ. ಹಿ. ಪ್ರ. ಶಾಲೆ ಆರಂತೋಡು ಇಲ್ಲಿಯ ಮುಖ್ಯ್ಯೋ ಪಾಧ್ಯಾಯ ಗೋಪಾಲಕೃಷ್ಣ ಬನ ಹಾಗೂ ಅಭಿವೃದ್ಧಿನಿರ್ವಹಣಾ ಸಮಿತಿ ಸಂಚಾಲಕರದ ಜಿ. ಜಗನ್ನಾಥ ಜಯನಗರ ಶುಭ ಹಾರೈಸಿದರು. ಅಧ್ಯಕ್ಷತೆ ಯನ್ನು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಬೋಮ್ಮೆಟ್ಟಿ ವಹಿಸಿದ್ದರು. ಶಾಲಾ ಮುಖ್ಯ್ಯೋ ಪಾಧ್ಯಾಯ ದೇವರಾಜ್ ಎಸ್. ಕೆ ಸ್ವಾಗತಿಸಿ, ಸಹಶಿಕ್ಷರಾದ ಬೆಳ್ಯಪ್ಪ ನಿರೂಪಿಸಿದರು. ಗೈಡ್ಸ್ ದಳದ ಸಂಯೋಜಕಿ ಹಾಗೂ ಸಹ ಶಿಕ್ಷಕಿ ಅಶ್ವಿನಿ ವಂದಿಸಿದರು.
ಗೈಡ್ಸ್ ಮಕ್ಕಳಿಗೆ ಸಮವಸ್ತ್ರ ವನ್ನು ಶಾಲಾ ಸಹ ಶಿಕ್ಷಕರ ರಾದ ಅಶ್ವಿನಿ ರವರ ಪತಿ ಭಾರತೀಯ ಭೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ರವೀಂದ್ರ ಎ. ಎಂ ರವರು ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಯೋಗಿ ಸಿದ್ದ ಮಠ ದ ಸ್ವಾಮೀಜಿ ರಾಜೇಶನಾಥ್ ಮರ್ಕಂಜ ರವರು ಕೊಡುಗೆಯಾಗಿ ನೀಡಿದರು.