ಅಡ್ಪಂಗಾಯ: ಶಿಕ್ಷಕಿ ರಾಜೀವಿಯವರಿಗೆ ಬೀಳ್ಕೊಡುಗೆ

0

ಅಡ್ಪಂಗಾಯ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ರಾಜೀವಿಯವರಿಗೆ ವರ್ಗಾವಣೆಯಾಗಿದ್ದು ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಎ.ಬಿ.ಅಶ್ರಫ್ ಸಅದಿ ಅಧ್ಯಕ್ಷತೆ ವಹಿಸಿದರು.

ಶ್ರೀಮತಿ ರಾಜೀವಿ ಎ ಯವರನ್ನು ಎಸ್. ಡಿ. ಎಂ. ಸಿ ಹಾಗೂ ಪೋಷಕರ ಹಾಗೂ ಹಳೆ ವಿದ್ಯಾರ್ಥಿ ಸಂಘ ವತಿಯಿಂದ ಗೌರವಿಸಲಾಯಿತು.
ಇದೇ ಸಂದರ್ಭ ಶಿಕ್ಷಕಿ ರಾಜೀವಿಯವರು ರೂ ೧೬,೦೦೦/- ಮೌಲ್ಯದ ಪ್ರಿಂಟರ್ ನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.
ಮುಖ್ಯ ಅತಿಥಿಗಳಾಗಿ ಅಜ್ಜಾವರ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಬೇಬಿ ಕಲ್ತಡ್ಕ, ಮಾಜಿ ಉಪಾಧ್ಯಕ್ಷೆ ಶ್ರೀಮತಿ ಲೀಲಾ ಮನಮೋಹನ್, ಸದಸ್ಯ ರಾಹುಲ್ ಅಡ್ಪಂಗಾಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹಸೈನಾರ್ ಹಾಜಿ ಗೊರಡ್ಕ,
ಅಜ್ಜಾವರ ಪ್ರೌಢಶಾಲಾ ಮುಖೋಪಾಧ್ಯಾಯ ಗೋಪಿನಾಥ್ , ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಿದ್ದೀಕ್,
ಅಜ್ಜಾವರ ಪ್ರೌಢಶಾಲಾ ಸಹ ಶಿಕ್ಷಕಿ ಶ್ರೀಮತಿ ವಿದ್ಯಾಶಂಕರಿ ವೇದಿಕೆಯಲ್ಲಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಧನಲಕ್ಷ್ಮೀ ಬಿ ಕುದ್ಪಾಜೆ ಸ್ವಾಗತಿಸಿದರು. ಎಸ್.ಡಿ.ಎಂ.ಸಿ. ಸದ್ಯಸ ಅಬ್ಬಾಸ್ ಎ.ಬಿ.ವಂದಿಸಿದರು. ಶ್ರೀಮತಿ ನರ್ಮದಾ ಎ ಸನ್ಮಾನ ಪತ್ರ ವಾಚಿಸಿದರು. ಶ್ರೀಮತಿ ಸುರೇಖಾ ರೈ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಗಂಧಿ ಎ ಮತ್ತು ವೀಣಾ ಎ ಬಿ ಸಹಕರಿಸಿದರು.