ಮೇದಿನಡ್ಕ ರಸ್ತೆಯಲ್ಲಿ ಕಸದ ರಾಶಿ..!

0

ಕಸ ಎಸೆದವರು ಯಾರು?

ಅಜ್ಜಾವರ ಗ್ರಾಮದ ಮೇದಿನಡ್ಕ – ನಾರ್ಕೋಡು ರಸ್ತೆಯ ಪಡ್ಡಂಬೈಲು ಕ್ರಾಸ್ ಬಳಿ ಕಸದ ರಾಶಿ ಹಾಕಲಾಗಿದೆ.


ವಾರದ ಹಿಂದೆ ಈ ಕಸದ ರಾಶಿ ಕಂಡು ಬಂದಿದ್ದು ತಂದು ಹಾಕಿದವರು ಯಾರೆಂದು ಇನ್ನೂ ಪತ್ತೆಯಾಗಿಲ್ಲ. ಈ ಕಸ ತಂದು ಹಾಕಿದವರನ್ನು ಕಂಡು ಹಿಡಿದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಊರವರು ಪಂಚಾಯತ್ ನ್ನು ಆಗ್ರಹಿಸಿದ್ದಾರೆ. ಆದರೆ ಇದುವರೆಗೂ ಕಸ ಹಾಕಿದವರಾರೆಂದು ಗೊತ್ತಾಗಿಲ್ಲ.