ಶಿಕ್ಷಣ ಇಲಾಖೆಯ ಮೈಸೂರು ವಿಭಾಗ ಮಟ್ಟದ ಯೋಗ ಸ್ಪರ್ಧೆಯಲ್ಲಿ ದೇವಚಳ್ಳ ಶಾಲೆ ವಿದ್ಯಾರ್ಥಿನಿ ಕು.ದೀಕ್ಷಾ ರಾಜ್ಯಮಟ್ಟಕ್ಕೆ

0

ಜಿಲ್ಲಾಡಳಿತ ಉಡುಪಿ ಹಾಗೂ ಜಿಲ್ಲಾ ಪಂಚಾಯತ್ ಉಡುಪಿ, ಶಾಲಾ ಶಿಕ್ಷಣ ಇಲಾಖೆ, ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಇವುಗಳ ಆಶ್ರಯದಲ್ಲಿ, ಅಮೃತ ಭಾರತಿ ಶಿಕ್ಷಣ ಸಂಸ್ಥೆ ಹೆಬ್ರಿಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ ಮೈಸೂರು ವಿಭಾಗ ಮಟ್ಟದ ಯೋಗ ಸ್ಪರ್ಧೆಯಲ್ಲಿ ದೇವಚಳ್ಳ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿ ನಿ ಕು.ದೀಕ್ಷಾ ರಾಜ್ಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಈಕೆ ಅ.20ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಲಿದ್ದಾಳೆ. ಈಕೆಗೆ ಯೋಗ ಗುರುಗಳಾದ ಸಂತೋಷ್ ಮುಂಡಕಜೆ ತರಬೇತಿ ನೀಡಿದ್ದಾರೆ. ದೀಕ್ಷಾ ಎಲಿಮಲೆಯ ಸಿದ್ಧಲಿಂಗ ಮತ್ತು ಕೋಮಲಾಂಗಿ ದಂಪತಿಗಳ ಪುತ್ರಿ.‌