ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ , ಶ್ರೀ ಶಾರದೋತ್ಸವ ಸಮಿತಿ- 2023 ಇದರ ಆಶ್ರಯದಲ್ಲಿ 14ನೇ ವರ್ಷದ ಪಂಜ ಪರಿಸರದ ನಾಡ ಹಬ್ಬ ಶ್ರೀ ಶಾರದೋತ್ಸವ -2023 ಅ.23.ರಂದು ವಿವಿಧ ವೈಧಿಕ,ಧಾರ್ಮಿಕ,ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಲಿದ್ದು. ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ನಡೆಯಿತು.
ಸಭಾಧ್ಯಕ್ಷತೆಯನ್ನು ಉತ್ಸವ ಸಮಿತಿ ಅಧ್ಯಕ್ಷ ಕುಸುಮಾಧರ ಕೆಮ್ಮೂರು
ವಹಿಸಿದ್ದರು.ಸಾಂಸ್ಕೃತಿಕ ಸ್ಪರ್ಧೆಯನ್ನು ಕೂತ್ಕುಂಜ ಶ್ರೀ ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಹೆಗ್ಡೆ ರವರು ಉದ್ಘಾಟಿಸಿದರು. ಕ್ರೀಡಾ ಸ್ಪರ್ಧೆಯನ್ನು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ ಉದ್ಘಾಟಿಸಿದರು.
ರಾಜ್ಯ ಲಗೋರಿ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ಒಡಿಯೂರು ಗ್ರಾಮ ವಿಕಾಸನ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ಗೀತಾ, ಕ್ರೀಡಾ ಸಂಚಾಲಕ ಯೋಗೀಶ್ ಚಿದ್ಗಲ್, ಸಾಂಸ್ಕೃತಿಕ ಸ್ಪರ್ಧೆಗಳ ಸಂಚಾಲಕ ಸತೀಶ್ ಪಂಜ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಉತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ ಶಿರಾಜೆ , ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾನಿಕಾ ಪ್ರಾರ್ಥಿಸಿದರು.ಗುರುಪ್ರಸಾದ್ ತೋಟ ಸ್ವಾಗತಿಸಿದರು.ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ನಾರಾಯಣ ಶಿರಾಜೆ ವಂದಿಸಿದರು.
ಪೂರ್ವಾಹ್ನ ಪ್ರತಿಷ್ಠೆ ನಡೆದು,ಭಜನಾ ಸಂಕೀರ್ತನೆ , ಮಕ್ಕಳಿಗೆ ಅಕ್ಷರಾಭ್ಯಾಸ , ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ಜರುಗಲಿದೆ
ಪೂರ್ವಾಹ್ನ ಗಂಟೆ 11ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಕುಸುಮಾಧರ ಕೆಮ್ಮೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಸುಳ್ಯ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ ಪಾಲ್ಗೊಳ್ಳಲಿದ್ದಾರೆ. ಸುಳ್ಯ ಸ.ಪ.ಪೂ.ಕಾಲೇಜು(ಪ್ರೌಢಶಾಲಾ ವಿಭಾಗ) ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ,
ಪಂಜ ಕ್ಲಸ್ಟರಿನ 9 ಶಾಲೆಗಳ ಆಯ್ದು 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಪ್ರತಿಭಾ ಪುರಸ್ಕಾರ ಜರಗಲಿದೆ.ನೋಟರಿ ಮತ್ತು ವಕೀಲ ಪುರುಷೋತ್ತಮ ಮಲ್ಕಜೆ ರವರು ಪುರಸ್ಕರಿಸಲಿದ್ದಾರೆ.
ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು: ಭಕ್ತಿ ಗೀತೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಕಿರಿಯ ,ಹಿರಿಯ, ಪ್ರೌಢ, ಸಾರ್ವಜನಿಕ ವಿಭಾಗದಲ್ಲಿ ಜರುಗಲಿದೆ. ಮಹಿಳೆಯರಿಗೆ ಸಂಗೀತ ಕುರ್ಚಿ,ಮೋಜಿನ ಆಟಗಳು.ರಂಗೋಲಿ ಸ್ಪರ್ಧೆ ಕಿರಿಯ, ಪ್ರೌಢ , ಸಾರ್ವಜನಿಕ ವಿಭಾಗದಲ್ಲಿ ಜರುಗಲಿದೆ. ಚಿತ್ರಕಲಾ ಸ್ಪರ್ಧೆ ಎಲ್ ಕೆ ಜಿ, ಯು ಕೆ ಜಿ ,1 ನೇ ತರಗತಿ ಐಚ್ಚಿಕ.2ರಿಂದ 4ನೇ ತರಗತಿ ಮಕ್ಕಳಿಗೆ ಸ್ವಚ್ಛ ಪರಿಸರ, 5 ರಿಂದ 7ನೇ ತರಗತಿ ಮಕ್ಕಳಿಗೆ ಶಾರದೆ, 8ರಿಂದ 10 ನೇ ತರಗತಿ ಮಕ್ಕಳಿಗೆ ಜಾನಪದ ಕಲೆಗಳು ವಿಷಯದಲ್ಲಿ ಸ್ಪರ್ಧೆಗಳು ಜರುಗಲಿದೆ.ಎಲ್.ಕೆ.ಜಿ, ಯು.ಕೆ.ಜಿ, ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆಜಿಗಿತ ನಡೆಯಲಿದೆ. 70ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ಪ್ರಥಮ ರೂ.5000 ಮತ್ತು ಟ್ರೋಪಿ, ದ್ವಿತೀಯ ರೂ.3000 ಮತ್ತು ಟ್ರೋಪಿ. ಸೆಮಿ ಫೈನಲ್ ನಲ್ಲಿ ನಿರ್ಗಮಿತ ತಂಡಗಳಿಗೆ ತಲಾ ರೂ.1000 ನಗದು ಬಹುಮಾನ ವಿರುತ್ತದೆ. ಮಹಿಳೆಯರ
ಹಗ್ಗಜಗ್ಗಾಟ ಪ್ರಥಮ ರೂ.1500, ದ್ವಿತೀಯ ರೂ.1000 ನಗದು
ಬಹುಮಾನವಿರುತ್ತದೆ.
ಸಾಂಸ್ಕೃತಿಕ ಸಂಭ್ರಮ : ಮಧ್ಯಾಹ್ನ 1.30 ರಿಂದ ರಂಜನಿ ಸಂಗೀತ ಸಭಾ -ಪಂಜ ಶಾಖೆ ಇದರ ವಿದ್ಯಾರ್ಥಿಗಳಿಂದ ಲಘು ಶಾಸ್ತ್ರೀಯ ಸಂಗೀತ ಗಾಯನ. ಡ್ಯಾನ್ಸ್ & ಬೀಟ್ಸ್ ನೃತ್ಯ ಕಲಾ ಕೇಂದ್ರದವರಿಂದ ನೃತ್ಯ ವೈವಿಧ್ಯ. ವಿಶ್ವ ಕಲಾನಿಕೇತನ ಕಲ್ಚರಲ್ ಮತ್ತು ಆರ್ಟ್ಸ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಭರತ ನಾಟ್ಯ ಪ್ರದರ್ಶನ ಗೊಳ್ಳಲಿದೆ.
ವೈಭವದ ಶೋಭಾಯಾತ್ರೆ:
ಸಂಜೆ ಗಂಟೆ 6 ರಿಂದ ಶ್ರೀ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ -ಜಲಸ್ತಂಭನದಲ್ಲಿ ಕುಣಿತ ಭಜನೆ, ಭಜನೆ ,ಕೋಲಾಟ, ವಿಶೇಷ ಆಕರ್ಷಣೆಯಾಗಲಿದೆ.