ಬಾಳಿಲ ಶಾರದೋತ್ಸವ – ಸೇವಾ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ

0

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ – ಮುಪ್ಪೇರ್ಯ ಇದರ ಆಶ್ರಯದಲ್ಲಿ ನಡೆಯುತ್ತಿರುವ 19ನೇ ವರ್ಷದ ಶಾರದೋತ್ಸವ ಸಂದರ್ಭದಲ್ಲಿ ಅ. 23ರಂದು ಸಂಜೆ ಸೇವಾ ಗೌರವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಬಾಳಿಲ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ‌ ಸಲ್ಲಿಸಿ ನಿವೃತ್ತರಾದ ಕು. ಲಕ್ಷ್ಮೀ, ಕೆ.ಎಸ್.ಆರ್.ಟಿ.ಸಿ.ಯಲ್ಲಿ ಚಾಲಕ ಕಂ ನಿರ್ವಾಹಕರಾಗಿರುವ ದೇವಪ್ಪ ಕಾಂಚೋಡು, ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವೇಕ್ ಮರೆಂಗಾಲ ಮತ್ತು ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಶಿಕ್ಷಕ ಶಿವಪ್ರಸಾದ್ ಕೆ ಯವರಿಗೆ ಸೇವಾ ಪುರಸ್ಕಾರ ಹಾಗೂ ಬಿ.ಬಿ.ಎಂ ಪದವಿಯಲ್ಲಿ 5ನೇ ರ್ಯಾಂಕ್ ಪಡೆದ ಹರ್ಷಿತಾ ಯಾದವ್, ಬಿಕಾಂ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಹರ್ಷಿತಾ ಸಿ ಮತ್ತು ಧನ್ಯಕುಮಾರಿ, ಪದವಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅಕ್ಷತಾ ಮತ್ತು ಮನೋಜ್, ಪಿ.ಯು. ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಮೇಘಾ ಎಂ.ಜಿ, ಎಸ್.ಎಸ್.ಎಲ್. ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಇಂಚರಾ ಕೆ.ವಿ, ಮೌಲ್ಯ ಎಂ.ಬಿ, ಜನಕ ಕೆ, ವಸ್ಥಿಕ್ ಬಿ.ಐ, ದೀಪಾ ಕೆ, ಜಸ್ಮಿತಾ, ಸುಶ್ಮಿತಾ ಸಿ, ದೀಕ್ಷಾ ರೈ ಮತ್ತು ಅಖಿಲ್ ರಿಗೆ ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ರಾವ್ ಯು, ಕಾರ್ಯಾಧ್ಯಕ್ಷ. ಸುಧಾಕರ ರೈ ಎ.ಎಂ, ಅಧ್ಯಕ್ಷ ಶೇಷಪ್ಪ ಪರವ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಕಮಲ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಪ್ರತಿಭಾನ್ವಿತರನ್ನು ಅಭಿನಂದಿಸಿದರು. ರಾಧಾಕೃಷ್ಣ ರಾವ್ ಯು ಅಭಿನಂದನಾ ಮಾತುಗಳನ್ನಾಡಿದರು. ರಾಜೇಶ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು. ಅಭಿನಂದನಾ ಕಾರ್ಯಕ್ರಮದ ಬಳಿಕ ದೇವದಾಸ್ ಕಾಫಿಕಾಡ್ ಮತ್ತು ತಂಡದಿಂದ ಪುದರ್ ದೀದಾಂಡ್ ತುಳು ಹಾಸ್ಯ ನಾಟಕ ನಡೆಯಿತು.