ಸುಳ್ಯ ಎಂ.ಜಿ.ಎಂ. ಮೈದಾನದಲ್ಲಿ ತಾಲೂಕು ಪ್ರಾಥಮಿಕ – ಪ್ರೌಢಶಾಲಾ ಕ್ರೀಡಾಕೂಟ – ಕ್ರೀಡಾ ವಿಕ್ರಮ ಉದ್ಘಾಟನೆ

0

ಎರಡು ದಿನ ಕ್ರೀಡಾಕೂಟ – 5 ವಲಯದ 700 ಕ್ರೀಡಾಪಟುಗಳು‌ ಭಾಗಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗಳು ಸುಳ್ಯ – ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿ.ಪ್ರಾ. ಶಾಲೆ ಸುಳ್ಯ ಇವರ ಸಹಯೋಗದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟ – ಕ್ರೀಡಾ ವಿಕ್ರಮ – 2023 ಸುಳ್ಯದ ಕೊಡಿಯಾಲಬೈಲು ಎಂ.ಜಿ.ಎಂ. ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದು, ಅ.26 ರಂದು ಕ್ರೀಡಾಕೂಟದ ಉದ್ಘಾಟನೆ ನಡೆಯಿತು.

ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸೂಂತೋಡು ಅಧ್ಯಕ್ಷತೆ‌‌ ವಹಿಸಿದ್ದರು.

ಉಬರಡ್ಕ ಗ್ರಾ.ಪಂ. ಸದಸ್ಯ ಹರೀಶ್ ರೈ ಉಬರಡ್ಕ ಕ್ರೀಡಾಕೂಟ ಉದ್ಘಾಟಿಸಿದರು.

ಸುಳ್ಯ ಸೈಂಟ್ ಜೋಸೆಫ್ ಹಾಗೂ ಸೈಂಟ್ ‌ಬ್ರಿಜಿಡ್ಸ್ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ. ವಿಕ್ಟರ್ ಡಿಸೋಜರವರು ಧ್ವಜಾರೋಹಣ ನೆರವೇರಿಸಿದರು.

ಸುಳ್ಯ‌ ನಗರ ಪಂಚಾಯತ್ ಸದಸ್ಯರುಗಳಾದ ಡೇವಿಡ್ ಧೀರ ಕ್ರಾಸ್ತ, ಶಶಿಕಲಾ‌ ನೀರಬಿದಿರೆ, ಉಬರಡ್ಕ ಪಂಚಾಯತ್ ಸದಸ್ಯೆ ಮಮತಾ ಕುದ್ಪಾಜೆ, ತಹಶೀಲ್ದಾರ್ ಮಂಜುನಾಥ್,ಕೊಡಿಯಾಲಬೈಲು ಮಹಾತ್ಮಗಾಂಧಿ ಮಲ್ನಾಡ್ ಆ.ಮಾ. ವಿದ್ಯಾಸಂಸ್ಥೆ ಸಂಚಾಲಕ ದೊಡ್ಡಣ್ಣ ಬರೆಮೇಲು, ಸೈಂಟ್ ಬ್ರಿಜಿಡ್ಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ ವಿಶೇಷ ಆಹ್ವಾನಿತರಾಗಿದ್ದರು.

ಸೈಂಟ್ ಜೋಸೆಫ್ ಪ್ರೌಢಶಾಲಾ ಪೋಷಕ ಸಮಿತಿ ಅಧ್ಯಕ್ಷ ಗುರುಸ್ವಾಮಿ ಬಿ.ಜೆ, ಪ್ರಾಥಮಿಕ ಶಾಲಾ ಪೋಷಕ ಸಮಿತಿ ಅಧ್ಯಕ್ಷ ಜೆ.ಕೆ.ರೈ, ಪೂರ್ವ ಪ್ರಾಥಮಿಕ ಪೋಷಕ ಸಮಿತಿ ಅಧ್ಯಕ್ಷೆ ಭವ್ಯಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಹುಲ್ ಜಿ. ದಾಸ್, ಸೈಂಟ್ ಬ್ರಿಜಿಡ್ಸ್ ಶಾಲಾ ಪೋಷಕ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪ್ರವೀಣ್, ಸೈಂಟ್ ಜೋಸೆಫ್ ‌ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ, ಸೈಂಟ್ ಬ್ರಿಜಿಡ್ಸ್ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅಂತೋನಿ‌ ಮೇರಿ, ಕ್ಷೇತ್ರ ಸಮಮ್ವಯಾಧಿಕಾರಿ ಶೀತಲ್ ಯು.ಕೆ. , ಸೈಂಟ್ ಜೋಸೆಫ್ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಕೊರಗಪ್ಪ ಬೆಳ್ಳಾರೆ, ಪುಷ್ಪವೇಣಿ, ಸೈಂಟ್ ‌ಬ್ರಿಜಿಡ್ಸ್ ದೈ.ಶಿ. ಶಿಕ್ಷಕ ಉಮೇಶ್, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಕೆರೆಮೂಲೆ, ಪದವಿಧರೇತರ ಮುಖ್ಯೋಪಾಧ್ಯಾಯ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬನ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ಪಂಜ, ತಾಲೂಕು ಅಧ್ಯಕ್ಷ ಧನಂಜಯ ಮೇರ್ಕಜೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಶಿಕ್ಷಣ ಸಂಯೋಜಕರಾದ ಸಂಧ್ಯಾ ಕುಮಾರಿ, ನಳಿನಿ, ಬಿ.ಆರ್.ಸಿ. ಗಳಾದ ಮಮತಾ, ಸವಿತಾ ವೇದಿಕೆಯಲ್ಲಿದ್ದರು.

ಸನ್ಮಾನ : ಸಮಾರಂಭದಲ್ಲಿ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷ ಪರಿವೀಕ್ಷಣಾಧಿಕಾರಿ ಲಕ್ಷ್ಮೀಶ್ ರೈ ರೆಂಜಾಳ, ರಾಷ್ಟ್ರೀಯ ಕ್ರೀಡಾಪಟು ಆದರ್ಶ್ ಎಸ್.ಪಿ, ಬ್ರಯಾನ್ ರಾಲ್ ಸ್ಟನ್ ಗೋವಿಯಸ್ ರನ್ನು ಗೌರವಿಸಲಾಯಿತು. ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದ್ದು ತಾಲೂಕಿನ 5 ವಲಯಗಳ 700 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 80 ತೀರ್ಪುಗಾರರು ಆಗಮಿಸಿದ್ದಾರೆ. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ ಸ್ವಾಗತಿಸಿದರು. ಸಿಸ್ಟರ್ ಅಂತೋನಿ ಮೇರಿ ವಂದಿಸಿದರು. ‌ನಿವೃತ್ತ ಶಿಕ್ಷಕ ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.