ಗುತ್ತಿಗಾರು: ಸ್ವ ಸಹಾಯ ಸಂಘದ ಮಹಿಳೆಯರಿಗೆ ಕೌದಿ ಕೌಶಲ್ಯ ತರಬೇತಿ

0

ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ನಾಲ್ಕೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಗುತ್ತಿಗಾರು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಂಯುಕ್ತ ಆಶಯದಲ್ಲಿ ಸ್ವ – ಸಹಾಯ ಸಂಘದ ಮಹಿಳೆಯರಿಗೆ ಮೂರು ದಿನದ ಕೌದಿ ಕೌಶಲ್ಯ ತರಬೇತಿ ಕಾರ್ಯಗಾರವು ಅ.26 ರಂದು ಗುತ್ತಿಗಾರು ಪಂಚಾಯತ್ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.

ನಾಲ್ಕೂರು ಶಾಖೆ ಉಪ ವಲಯಾರಣ್ಯಾಧಿಕಾರಿ ಸದಾಶಿವ ಶಿಂಧಿಗಾರು ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು. ನಾಲ್ಕೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಉದಯಕುಮಾರ್ ದೇರಪ್ಪಜ್ಜನಮನೆ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತ, ತರಬೇತಿದಾರೆ ಮನೋರಮಾ ಮುಚ್ಚಾರ ಉಪಸ್ಥಿತರಿದ್ದರು.
ನಾಲ್ಕೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ದಿನೇಶ್ ಹಾಲೆಮಜಲು ಪ್ರಸ್ತಾವನೆಗೈದು, ಸ್ವಾಗತಿಸಿದರು. ಯಮಿತಾ ಪೂರ್ಣಚಂದ್ರ ಪೈಕ ಕಾರ್ಯಕ್ರಮ ನಿರೂಪಿಸಿದರು. ಅ.28ರವರೆಗೆ ತರಬೇತಿ ನಡೆಯಲಿದೆ.


ತರಬೇತಿಯಲ್ಲಿ ಬೇರೆ ಬೇರೆ ಗ್ರಾಮಗಳಿಂದ ಮತ್ತು ಒಕ್ಕೂಟಗಳಿಂದ ೫೦ಕ್ಕಿಂತ ಅಧಿಕ ಮಂದಿ ಭಾಗವಹಿಸಿದ್ದಾರೆ.


(ವರದಿ :ದಿನೇಶ್ ಹಾಲೆಮಜಲು)