ಸುಬ್ರಹ್ಮಣ್ಯ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಪಕ್ಷದ ಹಿರಿಯ ಕಾರ್ಯಕರ್ತ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಆದ ಪ್ರಭಾಕರ ಕುಮಾರಧಾರ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರಾದ ಸುಬ್ರಹ್ಮಣ್ಯ ಭಟ್ ಮಾನಾಡು ರವರಿಗೆ ಗ್ರಾಮ ಪಂಚಾಯತ್ ನ ಕುಮಾರಧಾರ ಸಭಾಭವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು.
ಪ್ರಮುಖರಾದ, ದಿನೇಶ್ ಸಂಪ್ಯಾಡಿ, ಅಚ್ಯುತ ಗೌಡ, ವೆಂಕಟೇಶ್ ಎಚ್ಎಲ್, ಕಿಶೋರ್ ಶಿರಾಡಿ, ಭವಾನಿಶಂಕರ ಪೂಂಬಾಡಿ, ಭಾರತೀದಿನೇಶ್, ಮೋನಪ್ಪ ಮಾನಾಡು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ.ಸದಸ್ಯರುಗಳು, ಸೊಸೈಟಿಯ ನಿರ್ದೇಶಕರುಗಳು, ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳು, ಹಾಗೂ ಹಿರಿಯ ಕಿರಿಯ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.