ಶ್ರೀದೇವಿಯ ವೈಭವದ ಶೋಭಾಯಾತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯರಿಂದ ಚಾಲನೆ
ಆಕರ್ಷಕ ಹುಲಿವೇಷ ಕುಣಿತ ಹಾಗೂ ಚಲಿಸುವ ಸ್ತಬ್ದಚಿತ್ರಗಳೊಂದಿಗೆ ನಗರದತ್ತ ಹೊರಟ ಶೋಭಾಯಾತ್ರೆ
ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ , ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ವತಿಯಿಂದ ನಡೆಯುತ್ತಿರುವ 52ನೇ ವರ್ಷ ಸುಳ್ಯ ದಸರಾ 2023 ಶೋಭಾಯಾತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಚಾಲನೆ ನೀಡಿದರು.
ಶೋಭಾಯಾತ್ರೆಯು ಎಲ್ಲಾ 13 ಸ್ತಬ್ದಚಿತ್ರಗಳೊಂದಿಗೆ ವಿಶೇಷ ಹುಲಿವೇಷ ಕುಣಿತ, ಕುಣಿತ ಭಜನೆ, ನಾಸಿಕ್ ಬ್ಯಾಂಡ್, ಕೊಂಬು ಕಹಳೆ, ಆಕರ್ಷಕ ಸಿಡಿಮದ್ದುಗಳ ಅಬ್ಬರದೊಂದಿಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರೀ ಶಾರದಾಂಬ ಕಲಾವೇದಿಕೆಯಿಂದ ಹೊರಟಿದ್ದು, ಎ.ಪಿ.ಎಂ.ಸಿ. , ವಿವೇಕಾನಂದ ವೃತ್ತ, ಜ್ಯೂನಿಯರ್ ಕಾಲೇಜು ರಸ್ತೆ, ಜ್ಯೂತಿ ಸರ್ಕಲ್ ಮೂಲಕ ಹಳೆಗೇಟು ತನಕ ಸಾಗಲಿದ್ದು, ಅಲ್ಲಿಂದ ಮರಳಿ ಸುಳ್ಯದ ಪ್ರಮುಖ ರಸ್ತೆಯಾಗಿ ಗಾಂಧಿನಗರ, ಕಾಯರ್ತೋಡಿ ವಿಷ್ಣುಸರ್ಕಲ್ ತನಕ ಸಾಗಿ ಕಾಂತಮಂಗಲದ ಬಳಿ ಪಯಸ್ವಿನಿ ನದಿಯಲ್ಲಿ ಜಲಸ್ತಂಭನಗೊಳ್ಳಲಿದೆ.