ಸುಳ್ಯದ ಮಾರ್ನಿಂಗ್ ಕ್ರಿಕೆಟ್ ಕ್ಲಬ್‌ನ (ಎಂಸಿಸಿ) ಹತ್ತನೇ ವರ್ಷಾಚರಣೆಯ ಪ್ರಯುಕ್ತ ಎಂಸಿಸಿ ಆಶ್ರಯದಲ್ಲಿ ಅ.29ರಂದು ಸುಳ್ಯದಲ್ಲಿ ರಸ್ತೆ ಓಟ ಸ್ಪರ್ಧೆ ನಡೆಯಿತು. ಪುರುಷರ ವಿಭಾಗ, ಮಹಿಳೆಯರ ವಿಭಾಗ, 17 ವರ್ಷ ಕೆಳಗಿನ ಬಾಲಕರ ವಿಭಾಗ, 17 ವರ್ಷ ಕೆಳಗಿನ ಬಾಲಕಿಯರ ವಿಭಾಗ ಹೀಗೆ 4 ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಯಿತು.
ಪುರುಷರ ಮುಕ್ತ ರಸ್ತೆ ಓಟ ಸ್ಪರ್ಧೆ
ಅರಂತೋಡಿನಿಂದ, ಮಹಿಳೆಯರ ವಿಭಾಗದ ರಸ್ತೆ ಓಟ ಪೆರಾಜೆಯಿಂದ, 17 ವರ್ಷ ಕೆಳಗಿನ ಬಾಲಕರ ಹಾಗೂ 17 ವರ್ಷ ಕೆಳಗಿನ ಬಾಲಕಿಯರ ವಿಭಾಗದ ರಸ್ತೆ ಓಟ ಅರಂಬೂರಿನಿಂದ ಆರಂಭ ಗೊಂಡಿತು.
ಸುಳ್ಯದ ಇಂಜಿನಿಯರ್ ಪ್ರಸನ್ನ ಕುಮಾರ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೊಯಿಂಗಾಜೆ, ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ನಟರಾಜ್ ಅವರು ರಸ್ತೆ ಓಟಕ್ಕೆ ಚಾಲನೆ ನೀಡಿದರು. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನ ತನಕ ನಡೆದ ರಸ್ತೆ ಓಟದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಾಳುಗಳು ಭಾಗವಹಿಸಿದ್ದರು.
ವಿಜೇತರು:
ಪುರುಷರ ವಿಭಾಗದಲ್ಲಿ
ಪ್ರಥಮ:ಟಿಷನ್ ಮಾದಪ್ಪ
ದ್ವಿತೀಯ: ಕಿರಣ್ ಕುಮಾರ್
ತೃತೀಯ:ಧನುಷ್.
ಮಹಿಳಾ ವಿಭಾಗದಲ್ಲಿ
ಪ್ರಥಮ:ಧನ್ಯ
ದ್ವಿತೀಯ:ಹರ್ಷಿತಾ
ತೃತೀಯ:ಲಿಖಿತಾ
17 ವರ್ಷ ಕೆಳಗಿನ ಬಾಲಕರ ವಿಭಾಗದಲ್ಲಿ
ಪ್ರಥಮ: ಪ್ರೇಕ್ಷಕ್
ದ್ವಿತೀಯ: ಜೀವನ್
ತೃತೀಯ: ಕಾರ್ತಿಕ್
17 ವರ್ಷ ವಿಭಾಗದ ಬಾಲಕಿಯರ ವಿಭಾಗದಲ್ಲಿ
ಪ್ರಥಮ: ಶ್ರದ್ಧಾ
ದ್ವಿತೀಯ:ದೀಪ್ತಿ ಕೆ.ಸಿ
ತೃತೀಯ: ಧನಲಕ್ಷ್ಮಿ.
ರಸ್ತೆ ಓಟದಲ್ಲಿ ಭಾಗವಹಿಸಿದ ಪುಟಾಣಿಗಳಾದ ಹಂಸಿಕ ಅಜಿತ್ ಪೇರಾಲು, ಆಯಾಂಶು ಹಾಗೂ ರೋಹನ್ ಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.ಸ್ಪರ್ಧೆಯ ವಿಜೇತರಿಗೆ ನಗದು, ಪದಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭ:
ಮುಕ್ತ ರಸ್ತೆ ಓಟದ ಸಮಾರೋಪ ಸಮಾರಂಭ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಸುಳ್ಯದ ಇಂಜಿನಿಯರ್ ಪ್ರಸನ್ನ ಕುಮಾರ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೊಯಿಂಗಾಜೆ,ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ,ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ನಟರಾಜ್, ಇಸುಬು, ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ಭಾಗವಹಿಸಿದ್ದರು. ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಮಾರ್ನಿಂಗ್ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷ ಗಿರೀಶ್ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು. ಎಂಸಿಸಿ ಸ್ಥಾಪಕಾಧ್ಯಕ್ಷ ಹಂಸ ಕಾತೂನ್, ಗೌರವಾಧ್ಯಕ್ಷ ರಾಜೇಶ್ ರೈ ಜಟ್ಟಿಪಳ್ಳ, ಕಾರ್ಯದರ್ಶಿ ಸಂತೋಷ್ ಕುಮಾರ್ ಜಟ್ಟಿಪಳ್ಳ, ಜೊತೆ ಕಾರ್ಯದರ್ಶಿ ನೌಷಾದ್, ಕೋಶಾಧಿಕಾರಿ ಆಸಿಫ್ ಕೋಲ್ಚಾರ್, ದಶಮಾನೋತ್ಸವ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್, ಕಾರ್ಯದರ್ಶಿ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು