ಅಕ್ಟೋಬರ್ 29 ರಂದು ಬೆಳಗಾವಿಯ ಖಾನಾಪುರ ದಲ್ಲಿ ನಡೆದ ರಾಷ್ಟ್ರಮಟ್ಟದ ಹಾಫ್ ಮ್ಯಾರಥಾನ್(21 ಕಿ.ಮೀ) ಸ್ಪರ್ಧೆ ಯಲ್ಲಿ ಬಳ್ಪ ಗ್ರಾಮದ ಜಸ್ಮಿತಾ ಕೊಡೆಂಕಿರಿ ಇವರು ದ್ವಿತೀಯ ಸ್ಥಾನದೊಂದಿಗೆ 7000/_ ರೂ ನಗದು ಪುರಸ್ಕಾರ ಹಾಗೂ ಶಾಶ್ವತ ಫಲಕ ಪಡೆದುಕೊಂಡಿದ್ದಾರೆ.
ಇವರು ಬಳ್ಪ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.