ಜ್ಞಾನ ದೀಪ ವಿದ್ಯಾ ಸಂಸ್ಥೆ ಎಲಿಮಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕರಾದ ಗದಾಧರ ಬಾಳುಗೋಡು ಕನ್ನಡ ಧ್ವಜಾರೋಹಣವನ್ನು ನೆರವೇರಿಸಿ ದೀಪ ಬೆಳಗಿಸಿ ಕನ್ನಡ ರಾಜ್ಯೋತ್ಸವದ ಆಚರಣೆಯ ಮಹತ್ವವನ್ನು ತಿಳಿಸಿದರು.
ನಂತರ ಸಹ ಶಿಕ್ಷಕಿ ಕುಮಾರಿ ಪೂಜಾ ರವರು ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿಹೇಳುತ್ತಾ ಕನ್ನಡ ಹೋರಾಟಗಾರರ ಬಗ್ಗೆ ಹಾಗೂ ಕನ್ನಡ ಬಾವುಟದ ಹಳದಿ ಮತ್ತು ಕೆಂಪು ಬಣ್ಣವೂ ಕನ್ನಡಿಗರ ಭಾವೈಕತೆಯ ಸಂಕೇತವಾಗಿದೆ ಎಂದರು . ಕನ್ನಡ ಎನ್ನುವುದು ಒಂದು ಭಾಷೆ ಮಾತ್ರ ಆಗಿರದೆ ನಮ್ಮೆಲ್ಲರ ಉಸಿರಾಗಿರಬೇಕು ಎಂಬುದಾಗಿ ಕನ್ನಡ ರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ಬಳಿಕ ವಿದ್ಯಾರ್ಥಿಗಳು ನಾಡಗೀತೆ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿದರು.
ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಹಿರಿಯ ಸಹ ಶಿಕ್ಷಕಿ ಶ್ರೀಮತಿ ಜಯಂತಿ ಗುಡ್ಡೆ ಶಿಕ್ಷಕರಕ್ಷಕ ಸಂಘದ ಕಾರ್ಯದರ್ಶಿ ಶ್ರೀಮತಿ ಭಾರತಿ ಸಿ ಕೇಪಳ ಕಜೆ ಶಾಲಾ ವಿದ್ಯಾರ್ಥಿ ನಾಯಕ ನೂತನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯಾದ ಹನಿ ಅಂಬೆಕಲ್ಲು ಪ್ರಾರ್ಥಿಸಿದರು. ಶಾಲಾ ಸಹ ಶಿಕ್ಷಕಿ ರೇಖಾ ಮಾತಾಜಿಯವರು ಸ್ವಾಗತಿಸಿ ಧನ್ಯವಾದ ಗೈದರು. ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.