ಆಲೆಟ್ಟಿಯಲ್ಲಿ ನಡೆಯಲಿರುವ ಮುಕ್ತ ಕೇರಂ ಪಂದ್ಯಾಟದ ಕರಪತ್ರ ಬಿಡುಗಡೆ

0

ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಹಾಗೂ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಆಶ್ರಯದಲ್ಲಿ ನ.12 ರಂದು ಆಲೆಟ್ಟಿ ಸೊಸೈಟಿ ಸಭಾಭವನದಲ್ಲಿ ನಡೆಯಲಿರುವ ಮುಕ್ತ ಡಬಲ್ಸ್ ಮತ್ತು ಸಿಂಗಲ್ಸ್ ಕೇರಂ ಪಂದ್ಯಾಟದ ಕರ ಪತ್ರವನ್ನು ಆಲೆಟ್ಟಿ ಸದಾಶಿವ ದೇವಳದ ವಠಾರದಲ್ಲಿ ಇಂದು ಬಿಡುಗಡೆ ಮಾಡಲಾಯಿತು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ಸೇ.ಸ.ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ , ಜನನಿ ಕ್ಲಬ್ ಗೌರವಾಧ್ಯಕ್ಷ ಮಾಧವ ನಾಯ್ಕ್ ಎಲಿಕ್ಕಳ, ಲತೀಶ್ ಗುಂಡ್ಯ, ನಿತಿನ್ ಗುಂಡ್ಯ, ಅಧ್ಯಕ್ಷ ತೀರ್ಥಕುಮಾರ್ ವಾಲ್ತಾಜೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.