ಗುತ್ತಿಗಾರು: ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

0

ಸುಳ್ಯ ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಗುತ್ತಿಗಾರು ಪದವಿ ಪೂರ್ವ ಕಾಲೇಜು ಅತಿಥ್ಯದಲ್ಲಿ ನ.3 ರಂದು ಉದ್ಘಾಟನೆಗೊಂಡಿತು.

ಇಂಜಿನಿಯರ್ ಮಣಿಕಂಠ ಕ್ರೀಡಾಕೂಟ ಉದ್ಘಾಟಿಸಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ಕಡ್ಲಾರು, ಎಸ್ ಡಿ ಎಂ ಸಿ ಅಧ್ಯಕ್ಷ ಕೇಶವ ಕಾಂತಿಲ, ಪ್ರಾಂಶುಪಾಲೆ ಚೆನ್ನಮ್ಮ, ಕಾಲೇಜು ಅಭಿವೃದ್ಧಿ ಸಮಿತಿಯ ಗಿರೀಶ್ ಮಾವಜಿ, ಕಟ್ರಾಂಕ್ಟರ್ ಶ್ರೇಯಸ್ ಮುತ್ಲಾಜೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ನೆಲ್ಸನ್, ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಏನೆಕಲ್ಲು ಮತ್ತಿತರರು ಉಪಸ್ಥಿತರಿದ್ದರು.