ಎಂ.ಎಸ್.ಸುಬ್ರಹ್ಮಣ್ಯ ಮದುವೆಗದ್ದೆಯವರ ಪುತ್ರಿ ಐಶ್ವರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೋಲೀಸರಿಂದ ಬಂಧಿತರಾಗಿರುವ ಐವರು ಆರೋಪಿಗಳನ್ನು ಪೋಲೀಸರ ವಿನಂತಿಯ ಮೇರೆಗೆ ನ್ಯಾಯಾಲಯ ಪೋಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಮೃತ ಐಶ್ವರ್ಯರ ಪತಿ ರಾಜೇಶ, ಮಾವ ಕಾಪಿಲ ಗಿರಿಯಪ್ಪ ಗೌಡ, ಅತ್ತೆ ಸೀತಾ, ಮೈದುನ ವಿಜಯ್ ಹಾಗೂ ಓರಗಿತ್ತಿ ತಸ್ಮಯ್ ರವರನ್ನು ನಿನ್ನೆ ಬೆಂಗಳೂರಿನ ಗೋವಿಂದರಾಜನಗರ ಪೋಲೀಸರು ಬಂಧಿಸಿದ್ದರು.
ಅ.26 ರಂದು ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡು ತಮ್ಮ ಮೇಲೆ ವರದಕ್ಷಿಣೆ ಕಿರುಕುಳ ಹಾಗೂ ಮಾನಸಿಕ ಹಿಂಸೆಯ ಕೇಸು ದಾಖಲಾದ ಬಳಿಕ ಗಿರಿಯಪ್ಪ ಗೌಡ ಕುಟುಂಬ ಬೆಂಗಳೂರಿನಿಂದ ಗೋವಾಕ್ಕೆ ಹೋಗಿ ಅಲ್ಲಿಂದ ಮುಂಬೈಗೆ ಹೋಗುತ್ತಿದ್ದಾಗ ಪೋಲೀಸರು ಬಂಧಿಸಿದ್ದರು.
ಇಂದು ಅವರನ್ನು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ 24 ನೇ ಅಡಿಶನಲ್ ಸಿ.ಎಂ.ಎಂ. ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಅ ವೇಳೆ ಪೋಲೀಸರು, ತಮಗೆ ವಿಚಾರಣೆಗಾಗಿ ಇವರು ಬೇಕಾಗಿದ್ದಾರೆಂದು ಕೇಳಿದುದರಿಂದ ನ್ಯಾಯಾಲಯವು ಐವರು ಆರೋಪಿಗಳನ್ನೂ ಹದಿನಾಲ್ಕು ದಿನಗಳ ಕಾಲ ಪೋಲೀಸ್ ಕಸ್ಡಡಿಗೆ ಒಪ್ಪಿಸಿತೆಂದು ತಿಳಿದುಬಂದಿದೆ.