ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಪಾಲನಾ ಪರಿಷತ್ತಿನಿಂದ ಫಾ. ವಿಕ್ಟರ್ ಡಿಸೋಜಾ ಅವರಿಗೆ ಅಭಿನಂದನೆ

0

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ಅವರು ನಡೆಸಿದ ಹಿರಿಯರ ಕ್ರೀಡಾಕೂಟದಲ್ಲಿ ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚಿನ ಧರ್ಮ ಗುರುಗಳಾದ ರೆ.ಫಾ. ವಿಕ್ಟರ್ ಡಿಸೋಜ ಅವರು ಭಾಗವಹಿಸಿ ಕಂಚಿನ ಪದಕ ಪಡೆದುಕೊಂಡಿದ್ದು,
ನ. 5 ರಂದು ನಡೆದ ಚರ್ಚಿನ ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ನವೀನ್ ಮಚಾದೊ ಅವರು ಧರ್ಮ ಗುರುಗಳಿಗೆ ಹೂವು ನೀಡಿ ಅಭಿನಂದಿಸಿದರು.

ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಜೂಲಿಯಾನ ಬೀರಮಂಗಲ, ಸದಸ್ಯರುಗಳಾದ ಸಿರಿಲ್ ಡಿಸೋಜಾ, ಗಾಡ್ ಫ್ರೀಮೊಂತೇರೋ,
ಪ್ಲೇ ವಿ ಡಿಸೋಜ, ಹಾಗೂ ಸದಸ್ಯರುಗಳು ಹಾಜರಿದ್ದರು.

ಮಾಜಿ ಉಪಾಧ್ಯಕ್ಷ ಸಿರಿಲ್ ಡಿಸೋಜಾ ಪ್ರಸ್ತಾವಿಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಸೈಂಟ್ ಬ್ರಿಜಿಡ್ಸ್ ಶಾಲೆಯ ಮುಖ್ಯೋಪಾಧ್ಯಾಯ ಸಿ. ಅಂತೋನಿ ಮೇರಿ, ಸಿ. ಮೆಟಿಲ್ಡ. ಶಾಲಾ ಶಿಕ್ಷಕಿಯರು, ಪೋಷಕರು, ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.