ಧನಾತ್ಮಕ ಚಿಂತನೆ ಇಟ್ಟುಕೊಳ್ಳಿ. ಮುಖದಲ್ಲಿ ನಗುವನ್ನು ಧರಿಸಿಕೊಳ್ಳಿ. ಅದು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಅಸಹಾಯಕರಿಗೆ ಸಹಾಯ ಮಾಡಿ. ಸಮಾಜ ಸೇವೆಯಿಂದ ಸಂತೋಷ ಸಿಗುತ್ತದೆ. ಜೀವನದಲ್ಲಿ ಕನಸು ಕಾಣುತ್ತಿರಬೇಕು, ಕನಸು ನಿಮ್ಮನ್ನು ಎತ್ತರಕ್ಕೆ ಕೊಂಡೊ ಯ್ಯುತ್ತದೆ. ಸಾಮಾಜಿಕ ತೊಂದರೆಗಳಿಗೆ ನಮ್ಮಿಂದ ಆದಷ್ಟು ಸಹಾಯ ಮಾಡಬೇಕು. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸಾಮರ್ಥ್ಯವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಿ” ಎಂದು ಸೈಕಲ್ ಮತ್ತು ಬೈಕ್ ನಲ್ಲಿ ದೇಶ ಸುತ್ತುವ ಸಾಹಸಿ ಶ್ರೀಮುರಳೀಯವರು
ಹೇಳಿದರು.
ಭಾರತದ ವಾಯು ಪಡೆಯ ಮಾಜಿ ಸೈನಿಕರಾಗಿರುವ ಅವರು ನ.6ರಂದು ತನ್ನ 20 ನೇ ಪರಿಕ್ರಮದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು. ಪೂನಾ ಸಮೀಪದ ಮಾಲೆಗಾವ್ ಬುಡಕಟ್ಟು ಶಾಲೆಯಿಂದ ಅವರು ಬೈಕ್ ನಲ್ಲಿ ನೇರವಾಗಿ ಸ್ನೇಹ ಶಾಲೆಗೆ ಬಂದಿದ್ದರು. ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಪ್ರತಿಯೊಬ್ಬರೂ
ಬದುಕಿನ ಸಾರ್ಥಕತೆಗೆ ಸಮಾಜಸೇವೆ ಮಾಡಬೇಕೆಂದರು. ಅವರನ್ನು ಸ್ನೇಹ ಶಾಲೆಯ ವತಿಯಿಂದ ಡಾ. ಚಂದ್ರಶೇಖರ ದಾಮ್ಲೆಯವರು ಸನ್ಮಾನಿಸಿದರು. ಮುರಳೀಯವರು ತಾನು ಪ್ರಕಟಿಸಿದ ಕೃತಿಗಳನ್ನು ಹಾಗೂ ₹10,000/- ದೇಣಿಗೆಯನ್ನು ಶಾಲೆಗೆ ನೀಡಿದರು.
ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಘವ ರಾವ್ ಉಬರಡ್ಕ ಇವರು ಶಾಲೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಇವರು ಸ್ವಾಗತಿಸಿದರು. ಸಂಸ್ಥೆಯ ಶಿಕ್ಷಕ ದೇವಿಪ್ರಸಾದ ಜಿ.ಸಿ ಇವರು ವಂದಿಸಿದರು. ಸಂಸ್ಥೆಯ ಶಿಕ್ಷಕಿ ಶ್ರೀಮತಿ ಸವಿತಾ ಎಂ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇಲ್ಲಿಂದ ಕಾಸರಗೋಡಿನ ಏಳ್ ಕಾನ ಗುಂಡಿ ಶಾಲೆಗೆ ತೆರಳಿದ ಅವರನ್ನು ಹಾರ್ದಿಕವಾಗಿ ಬೀಳ್ಕೊಡಲಾಯಿತು.