ಮಲೆನಾಡು ಜಂಟಿ ಕ್ರಿಯಾ ಸಮಿತಿ ವತಿಯಿಂದ ಸುಳ್ಯದಲ್ಲಿ ಪತ್ರಿಕಾಗೋಷ್ಠಿ
ಕಳೆದ ಹಲವಾರು ವರ್ಷಗಳಿಂದ ಮಲೆನಾಡಿನ ಐದು ಜಿಲ್ಲೆಗಳು ನನ್ನ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಪರಿಹರಿಸುವಲ್ಲಿ ಸರಕಾರಗಳು ವಿಫಲವಾಗುತ್ತಿದೆ.
ದಿನದಿಂದ ದಿನಕ್ಕೆ ಈ ಭಾಗದ ಜನರ ಸಮಸ್ಯೆಗಳು,ದ್ವೇಯ ಉದ್ದೇಶಗಳು, ಆಚಾರ ವಿಚಾರಗಳ ಮೇಲೆ ತೊಂದರೆಗಳು ಉಂಟಾಗುವುದಲ್ಲದೆ ಪರಿಹಾರಗಳು ಕಂಡು ಬರುತ್ತಿಲ್ಲ.
ಅದಕ್ಕೆ ಏಕೈಕ ಮಾರ್ಗ ಒಂದೇ ಸಂಘಟನೆಯ ಶಕ್ತಿಯನ್ನು ರಾಜಕೀಯ ಶಕ್ತಿಯನ್ನಾಗಿ ಬೆಳೆಸುವುದು.
ಈ ಹಿನ್ನೆಲೆಯಲ್ಲಿ ಮಲೆನಾಡಿನ ಉಳಿವಿಗೆ ರಾಷ್ಟ್ರೀಯ ಮಲೆನಾಡು ಸಮಿತಿ ಜನರ ಹತಾಶೆ ಮತ್ತು ಅಪೇಕ್ಷೆಯ ಮೇರೆಗೆ ದ ಕ ಜಿಲ್ಲಾ ಮಲೆನಾಡು ಜಂಟಿ ಕ್ರಿಯಾ ಸಮಿತಿ ರಾಜಕೀಯ ಸಂಘಟನೆಗೆ ಪ್ರವೇಶ ಮಾಡಲಿದೆ ಎಂದು ಸಂಚಾಲಕ ನ್ಯಾಯವಾದಿ ಪ್ರದೀಪ್ ಕುಮಾರ್ ಕೆ ಎಲ್ ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಅವರು 2010ರಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ರಚಿಸಿರುವ ಈ ಸಂಘಟನೆಯು ನಮ್ಮ ಭಾಗದ ಹತ್ತು ಹಲವಾರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ ಸರ್ಕಾರಕ್ಕೆ ಮನವಿ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮ ಮನವಿ ಕೇವಲ ಮನವಿಯಾಗಿ ಮಾತ್ರ ಉಳಿಯುತ್ತಿದ್ದು ಯಾವುದೇ ಪ್ರಯೋಜನಗಳು ಕಂಡುಬರುತ್ತಿಲ್ಲ. ಯಾವುದೇ ಸರ್ಕಾರಗಳು ಆಡಳಿತಕ್ಕೆ ಬಂದರೂ ಈ ಭಾಗದ ಮೂಲ ನಿವಾಸಿಗಳ ಮೂಲಭೂತ ಹಕ್ಕುಗಳಿಗೆ ನ್ಯಾಯ ಸಿಗುತ್ತಿಲ್ಲ ಎಂದು ಹೇಳಿದರು.
2011ರಲ್ಲಿ ಗ್ರೇಟರ್ ತಲಕಾವೇರಿ, ಆನೆ ಕಾರಿಡಾರ್, ವನ್ಯಧಾಮ ವಿಸ್ತೀರ್ಣ ಇನ್ನಿತರ ಮೂಲ ನಿವಾಸಿಗಳ ಮೂಲಭೂತ ಹಕ್ಕುಗಳಿಗೆ ಸಮಸ್ಯೆ ಬಂದಾಗ ಹೋರಾಟಕ್ಕೆ ಧುಮುಕಿ ನಿರಂತರ ಹೋರಾಟ ಮಾಡುತ್ತಾ ಮಲೆನಾಡು ಜಂಟಿ ಕ್ರಿಯಾ ಸಮಿತಿ ಬಂದಿದೆ.
ಆದರೆ ಇನ್ನು ಮುಂದಕ್ಕೆ ಈ ರೀತಿ ಆಗಲು ಸಾಧ್ಯವಿಲ್ಲ, ಕೇವಲ ಮನವಿ ಕೊಡುವುದು ಮಾತ್ರ ಅಲ್ಲದೆ ಮುಂದಕ್ಕೆ ಜನರಿಂದ ಮನವಿ ಪಡೆದುಕೊಳ್ಳುವ ಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ.ಅದಕ್ಕಾಗಿ ನಮ್ಮದೇ ಆದ ರಾಜಕೀಯ ಸಂಘಟನೆಯ ಅವಶ್ಯಕತೆ ಬೇಕೆಂಬುದು ಈ ಭಾಗದ ಸಾವಿರಾರು ಮಂದಿ ಹೋರಾಟಗಾರರ ಅಭಿಲಾಷೆ ಆಗಿದೆ.
ಈ ಭಾಗದ ಜನರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳಿಗೆ ಯಾವುದೇ ತರಹದ ವ್ಯವಸ್ಥೆಗಳನ್ನು ಮಾಡದೆ ನೇರವಾಗಿ ವರದಿಯ ಆಧಾರದಲ್ಲಿ ಅಂತಹಂತವಾಗಿ ಆನೆ ಕಾರಿಡರ್, ಗ್ರೇಟರ್ ತಲಕಾವೇರಿ, ಪುಷ್ಪಗಿರಿ ವಿಸ್ತರಣೆ, ಕುದುರೆಮುಖ ವಿಸ್ತರಣೆ ಇನ್ನಿತರ ಜನ ವಿರೋಧಿ ನೀತಿಗಳನ್ನು ಅವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲು ಸರಕಾರಗಳು ಹೊರಟಾಗ ಇದರ ವಿರುದ್ಧ ಪ್ರತಿಭಟನೆಯನ್ನು ಮಾಡುವ ಮೂಲಕ ಮಲೆನಾಡಿನ ಹಕ್ಕಿಗಾಗಿ ಸತತವಾಗಿ ಪ್ರಯತ್ನವನ್ನು ಪಟ್ಟಿದ್ದೇವೆ.
ಇದೀಗ ಪ್ರಸ್ತುತ ಸಂದರ್ಭದಲ್ಲಿ ಮಲೆನಾಡು ಮಲೆನಾಡಾಗಿ ಉಳಿದಿಲ್ಲ. ಅತಿಕ್ರಮಣ ವಲಸೆ ಇರುವ ಮಲೆನಾಡಿನ ಯಾವುದೇ ಮಾಲಕರಿಗೂ ಇನ್ನಿತರ ಮಾಲಕರಿಗೂ,ಜನಸಾಮಾನ್ಯ ರೈತಾಪಿ ವರ್ಗದವರಿಗೂ ಹೆಚ್ಚಿನ ಅರಿವು ಇಲ್ಲದೆ ನಾನಾ ರೀತಿಯ ಗೊಂದಲಗಳಿಗೆ ಕಾರಣವಾಗಿದೆ.
ಕಾಮಗಾರಿಗಳ ಹೆಸರಲ್ಲಿ ಊರೊಳಗೆ ಉತ್ತರ ಭಾರತದ ಅಕ್ರಮ ವಲಸೆಗಾರರು ತುಂಬಿ ತುಳುಕುತ್ತಿದ್ದು ಇದೇ ರೀತಿ ಮುಂದುವರೆದಲ್ಲಿ ಮುಂದಿನ 10 ವರ್ಷದಲ್ಲಿ ಇಲ್ಲೊಂದು ಅಸ್ಸಾಂ ನಿರ್ಮಾಣವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
ಪ್ರಥಮವಾಗಿ ನಮ್ಮಲ್ಲಿರುವ ಮೀಸಲಾತಿ ಕಳೆದ 70 ವರ್ಷಗಳಿಂದ ನಿರಂತರವಾಗಿ ಸಾಗುತ್ತಿದೆ. ಇದರ ಬದಲಾವಣೆಗಾಗಿ ಹೋರಾಟವನ್ನು ಮಾಡುತ್ತಿದ್ದರು ಅರ್ಥ ಮಾಡಿಕೊಳ್ಳುವ ಶಕ್ತಿ ಅವರಲ್ಲಿ ಇಲ್ಲ. ನಾವು ಮೀಸಲಾತಿಯನ್ನು ವಿರೋಧಿಸುತ್ತಿಲ್ಲ. ಅದನ್ನು ನಿಯಮಿತ ಸಮಯಕ್ಕೆ ಮಾತ್ರ ಬಳಸಬೇಕೆಂಬುದು ಅಗ್ರಹವಾಗಿದೆ.
ಈ ಪದ್ಧತಿ ಸರಿಯಾದಲ್ಲಿ ನಾನಾ ಸಮಸ್ಯೆಗಳು ತನ್ನಿಂದ ತಾನೇ ಸರಿಯಾಗುತ್ತದೆ ಎಂದು ಹೇಳಿದರು.
1908 ಮತ್ತು 1964ರ ದಾಖಲೆ ಆಧಾರಿತ ಸರ್ವೆ ಕಾರ್ಯ ನಡೆಸುವುದು ಅಡ್ಡಂಗಲು ಇದ್ದ ಭೂಮಿಯನ್ನು ಬಿಟ್ಟು ಕೊಡುವುದು 30 ವರ್ಷದ ಹಿಂದೆ ಗ್ರಾಂಟ್ ಆದ ಭೂಮಿಗಳ ಪ್ಲಾಟಿಂಗ್ ಮಾಡದೇ ಇರುವುದು, ಅಲ್ಲದೆ ಶ್ರೀಮಂತರ ಫೈಲ್ ಗಳು ಮಾತ್ರ ಸರಿಯಾಗುವುದು ಬಡವರ ಫೈಲ್ ಗಳು ಸರಿ ಆಗದೆ ಇರುವುದು ಇವೆಲ್ಲವೂ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
ಸುಳ್ಯ ಕ್ಷೇತ್ರದಲ್ಲಿ ಇರುವ ಮೀಸಲಾತಿ ಪದ್ಧತಿಯನ್ನು ದೂರ ಮಾಡಿ ಪ್ರತಿ 20 ವರ್ಷಕ್ಕೊಮ್ಮೆ ಬದಲಾವಣೆ ನೀತಿಯನ್ನು ಅನುಸರಿಸಬೇಕು.ಮುಂದಿನ ದಿನಗಳಲ್ಲಿ ಮಲೆನಾಡಿನ ಶಾಸಕಾಂಗದ ಪ್ರತಿನಿಧಿಗಳು ಎಲ್ಲಾ ಇಲಾಖೆಯಲ್ಲಿರುವ ಭ್ರಷ್ಟಾಚಾರ ನಿಯಂತ್ರಣ ಮಾಡಬೇಕಾಗುತ್ತದೆ. ಕಂದಾಯ ಇಲಾಖೆ, ಸಬ್ ರಿಜಿಸ್ಟರ್ ಕಚೇರಿ, ಮಾನದಂಡ ಇಲಾಖೆ, ಮತ್ತು ಆರೋಗ್ಯ ಇಲಾಖೆ,ಪಶು ಸಂಗೋಪನಾ ಇಲಾಖೆಗಳು ಉತ್ತಮ ಕಾರ್ಯ ನಿರ್ವಹಿಸಬೇಕಾಗಿದೆ.
ಗ್ರಾಮ್ಯ ಆಚಾರ ವಿಚಾರ ಭಾಷೆ ಪದ್ಧತಿ ಹತ್ತಿರದ ವಿದ್ಯಾನಿಲಯಗಳಲ್ಲಿ ಅಳವಡಿಸಿವಿಕೆ.
ಮಲೆನಾಡಿನ ಜನರ ಅಭಿಲಾಷೆಯಂತೆ ಅಮರ ಸುಳ್ಯದ ಹೋರಾಟದ ಹೀರೋ ಪುಟ್ಟಬಸಪ್ಪರ ಹೆಸರಿನಲ್ಲಿ ಮಂಗಳೂರಿನ ನಂತೂರಿನ ಬಿಕರ್ಣ ಕಟ್ಟೆಯಲ್ಲಿ ಸ್ಮಾರಕ ನಿರ್ಮಾಣ, ರೈತ ಶ್ರಮಿಕರ ಸಹಕಾರಿ ಸಂಘದ ವತಿಯಿಂದ ಜನ ಮಾನಸದಲ್ಲಿ ಸಾಮಾಜಿಕ ಆರ್ಥಿಕ ಸಹಕಾರಿ ಉದ್ಯಮ, ಸುಳ್ಯ ಮೀಸಲಾತಿಯನ್ನು ವರ್ಗಾವಣೆ ಒತ್ತಾಯ ಈ ರೀತಿಯ ಜನ ಮತ್ತು ನಾಡು ಅಭಿವೃದ್ಧಿಯ ಕಾರ್ಯಕ್ರಮಗಳು ನಡೆಯಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಶೋಕ್ ಎಡಮಲೆ, ಮಾಧವ ಸುಳ್ಯಕೋಡಿ ಉಪಸ್ಥಿತರಿದ್ದರು.