ಹಳೆಗೇಟು : ಕುಡಿಯುವ ನೀರಿನ ಪೈಪ್ ಕಾಮಗಾರಿಗೆ ಅಗೆತ

0

ಫಲಕ ನೇತಾಡಿಸಿ ಬೇಸರ ವ್ಯಕ್ತಪಡಿಸಿದ ಸ್ಥಳೀಯರು

ಸುಳ್ಯದ ಹಳೆಗೇಟು ಅಡ್ಕ ಸಮೀಪ ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನಿರಂತರವಾಗಿ ಇಲ್ಲಿ ಗುಂಡಿ ತೆಗೆಯುವ ಕಾರ್ಯ ನಡೆಯುತ್ತಿರುತ್ತದೆ.

ಎರಡು ತಿಂಗಳಿಗೊಮ್ಮೆ ಪ್ರತಿ ಬಾರಿ ಇಲ್ಲಿ ಪೈಪ್ ಒಡೆಯುವುದು, ಬಳಿಕ ಅದಕ್ಕೆ ಸಂಬಂಧಪಟ್ಟವರು ಬಂದು ಅದನ್ನು ದುರಸ್ತಿ ಪಡಿಸಲು ಗುಂಡಿ ತೋಡುವುದು, ಇದು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತದೆ.
ಇದೀಗ ಇದರಿಂದ ಬೇಸತ್ತಿರುವ ಸ್ಥಳೀಯ ಸಾರ್ವಜನಿಕರು ನಿನ್ನೆ ನಡೆದ ದುರಸ್ತಿ ಕಾರ್ಯದ ಬಳಿಕ ಮಣ್ಣು ಮುಚ್ಚಿರುವ ಜಾಗದಲ್ಲಿ ‘ನಮ ಪೈಪ್ ದಕ್ಲೆಗ್ ಸುಳ್ಯದು ಬೇತೆ ಒಲ್ಪಲ ಬೇಲೆ ಇಜ್ಜಿ, ಅ lಯ್ಕೆ ಈ ರೋಡುಡೇ ದಿನಾಲಾ ಬತ್ತುದು ಒಕ್ಕುನು. ಎಲ್ಲೆ ಕುಡಾ ಬರ್ಪ, ಬರೋಂದುಪ್ಪುವಾ’ ಎಂದು ಬರೆದಿರುವ ಫಲಕವನ್ನು ಅಳವಡಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸುಳ್ಯ ನಗರದ ಹಲವಾರು ಕಡೆಗಳಲ್ಲಿ ಈ ಸಮಸ್ಯೆ ಆಗಾಗ ಎದ್ದು ಕಾಣುತ್ತಿರುತ್ತದೆ.ಇದಕ್ಕೆ ಮೂಲ ಕಾರಣ ಸುಳ್ಯ ನಗರ ಪಂಚಾಯತಿನ ಕುಡಿಯುವ ನೀರಿನ ಸರಬರಾಜಿನಲ್ಲಿ ಬಳಸಲಾಗಿರುವಂತಹ ಪೈಪುಗಳು ಬಹಳ ಅಳೆಯದಾಗಿದ್ದು ಅವುಗಳು ಕ್ಷೀಣಿಸಿ ಆಗಿಂದಾಗ ಅಲ್ಲಲ್ಲಿ ಒಡೆದು ಹೋಗುತ್ತಿದೆ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.

ಸುಳ್ಯದಲ್ಲಿ ಅತಿ ಶೀಘ್ರದಲ್ಲಿ ಆರಂಭಗೊಳ್ಳಲಿರುವ 58 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳಲ್ಲಿ ಇವೆಲ್ಲವೂ ಸರಿಯಾಗಲಿ ಎಂದು ಸಾರ್ವಜನಿಕರ ಕೋರಿಕೆಯಾಗಿದೆ.