ನಿವೃತ್ತ ಪಿಡಿಒ ಮಣಿಯಾನ ಮನೆ ಪುರುಷೋತ್ತಮ ಅವರಿಗೆ ಗುತ್ತಿಗಾರು – ಪೈಕದ ಹನ್ನೆರಡು ಒಕ್ಕಲುಗಳಿಗೆ ಸಂಬಂಧಪಟ್ಟ ಬೈಲಸ್ತರು ಸೇರಿಕೊಂಡು ನ.5 ರಂದು ಅಭಿನಂದಿಸಿದರು.
ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಮತ್ತು ವಳಲಂಬೆ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಡಿ ಯಂ ರಾಮಣ್ಣಗೌಡ ಶಾಲು, ಹಾರ ಹಾಕಿ, ಫಲ, ಪುಷ್ಪ ಮತ್ತು ಫಲಕ ನೀಡಿ ಅಭಿನಂದಿಸಿದರು.
ಊರ ಗೌಡರ ಪರವಾಗಿ ಜಗದೀಶ ಪೈಕರವರು ಪ್ರಾಸ್ತಾವಿಕ ನುಡಿಯೊಂದಿಗೆ ಶುಭಹಾರೈಸಿದರು.
ಊರಿನ ಹಿರಿಯರಾದ ಮುಚ್ಚಾರ ಚಿನ್ನಪ್ಪ ಗೌಡ ಶುಭ ಹಾರೈಸಿದರು.
ಈ ಸಂದರ್ಭ ಮಾತನಾಡಿ ಪುರುಷೋತ್ತಮ ಅವರು ತಾನು ಪಂಚಾಯತ್ ನಲ್ಲಿ ಜವಾನ ಹುದ್ದೆಯಿಂದ ಪಿಡಿಒ ಹುದ್ದೆಯವರೆಗೆ ಯಾವ ರೀತಿ ಕಷ್ಟಪಟ್ಟು, ಇಷ್ಟಪಟ್ಟು ಕೆಲಸ ನಿರ್ವಹಿಸಿದ ಬಗ್ಗೆ ಮತ್ತು ತನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ಲೋಕೇಶ್ವರ ಡಿ. ಆರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬಿ ಪೂರ್ಣ ಚಂದ್ರ ಧನ್ಯವಾದವನ್ನಿತ್ತರು.