ಆರೋಗ್ಯ ಮತ್ತು ಋತುಚಕ್ರದ ಬಗ್ಗೆ ಹದಿಹರೆಯದ ಹೆಣ್ಣು ಮಕ್ಕಳಿಗೆ ಮಾಹಿತಿ ಕಾರ್ಯಗಾರವು ಸರ್ಕಾರಿ ಪ್ರೌಢಶಾಲೆಯಲ್ಲಿ ಎಲಿಮಲೆಯಲ್ಲಿ ನ. 8ರಂದು ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ವೀಣಾ ಎನ್ ಸ್ತ್ರೀ ಆರೋಗ್ಯ ತಜ್ಞರು, ಸುಳ್ಯ ಇವರು ಹದಿಹರೆಯದ ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ Karnataka Seafarer’s Charitable Trust Bangalore ಇವರ ವತಿಯಿಂದ ಶಾಲೆಯ 107 ವಿದ್ಯಾರ್ಥಿನಿಗಳಿಗೆ ಸುಮಾರು ರೂ.33,000 ಮೌಲ್ಯದ ಮರುಬಳಕೆಯ ಪ್ಯಾಡ್ ಗಳನ್ನು ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಚಳ್ಳ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶ್ರೀ ಶೈಲೇಶ್ ಅಂಬೆಕಲ್ಲು ರವರು ವಹಿಸಿದ್ದರು. ಅತಿಥಿಗಳಾಗಿ Karnataka Seafarer’s Charitable Trust ನ ಪ್ರತಿನಿಧಿಗಳಾದ ಶ್ರೀಮತಿ ಚಂದನ ಮತ್ತು ಶ್ರೀಮತಿ ಅಶ್ವಿನಿ ಹಾಗೂ ಕೋಲ್ಚಾರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಲಜಾಕ್ಷಿ ಕುಕ್ಕಜೆ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಕೆ ಇವರು ಸ್ವಾಗತಿಸಿ, ಕನ್ನಡ ಶಿಕ್ಷಕಿ ಸಂಗೀತ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕಿ ರಾಜೇಶ್ವರಿ ಎಂ ಟಿ ಕಾರ್ಯಕ್ರಮ ನಿರೂಪಿಸಿದರು.