ಸುಳ್ಯ ಬಂಟರ ಸಂಘದಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

0

ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಸುಳ್ಯದಲ್ಲಿ ನಡೆಯಲಿರುವ ಸುಳ್ಯ ತಾಲೂಕು ಬಂಟರ ಸಮಾವೇಶದಲ್ಲಿ ವಿದ್ಯಾರ್ಥಿ ವೇತನ ನೀಡುವ ಉದ್ದೇಶದಿಂದ 2023ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಉತ್ತೀರ್ಣರಾದ (ಅಂಕಗಳ ಪರಿಗಣನೆ ಇಲ್ಲ) ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಸುಳ್ಯ ತಾಲೂಕಿನ ಬಂಟ ಸಮುದಾಯದ ವಿದ್ಯಾರ್ಥಿಗಳು ತಮ್ಮ ಬಿ.ಪಿ.ಎಲ್. ಪಡಿತರ ಚೀಟಿಯ ಮತ್ತು ಅಂಕಪಟ್ಟಿಯ ಪ್ರತಿಯನ್ನು ಒಂದು ಪಾಸ್ ಪೋರ್ಟ್ ಸೈಜ್ ಭಾವಚಿತ್ರದೊಂದಿಗೆ ತಮ್ಮ ಮಾಹಿತಿಯನ್ನು ಹಾಗೂ ಪ್ರತಿಭಾ ಪುರಸ್ಕಾರಕ್ಕಾಗಿ ಶೇ. 80% ಕ್ಕಿಂತ ಹೆಚ್ಚು ಅಂಕ ಗಳಿಸಿದ ಎ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿಗಳ ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟವನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗಳ ಮತ್ತು ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಮಾಹಿತಿ ಯನ್ನು ನವೆಂಬರ್ 25ರ ಮೊದಲು ಆಯಾ ವಲಯದ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳಲ್ಲಿ ಅಥವಾ ಸಂಘದ ಕಛೇರಿ ಕಾರ್ಯದರ್ಶಿಗಳಾದ ಶ್ರೀ ಕುಸುಮಾಧರ ರೈ ಬೂಡು ಅವರಲ್ಲಿ
ನೀಡಬೇಕೆಂದು ಸುಳ್ಯ ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಷ್ಚಂದ್ರ ರೈ
ತಿಳಿಸಿದ್ದಾರೆ.